ಸಲಿಂಗಿಗಳ ಡೇಟಿಂಗ್ ಆಪ್ ಬಳಸಿ ದರೋಡೆ!

ಮಂಗಳವಾರ, 15 ಫೆಬ್ರವರಿ 2022 (09:40 IST)
ಅಹಮ್ಮದಾಬಾದ್: ಸಲಿಂಗಿಗಳ ಡೇಟಿಂಗ್ ಆಪ್ ಬಳಸಿ ದೋರೆಡೆ ಮಾಡುತ್ತಿದ್ದ ಮೂವರನ್ನು ಅಹಮ್ಮದಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಸಲಿಂಗಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದ. ಡೇಟಿಂಗ್ ಆಪ್ ನಲ್ಲಿ ಚ್ಯಾಟ್ ಮಾಡುತ್ತಿದ್ದಾಗ ಈ ಮೂವರು ಮೊಬೈಲ್ ನಂಬರ್ ನೀಡಿದ್ದರು.

ಅದರಂತೆ ಅವರನ್ನು ಭೇಟಿ ಮಾಡಲು ಸ್ಥಳವೊಂದಕ್ಕೆ ಹೋದಾಗ ಅಲ್ಲಿ ಮೂವರೂ ವಿನಾಕಾರಣ ನಿಂದಿಸಲು ಆರಂಭಿಸಿದರು. ಬಳಿಕ ಸಂತ್ರಸ್ತನ ಫೋನ್ ನಿಂದ ಬಲವಂತವಾಗಿ 1 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಇದೇ ರೀತಿ ಇನ್ನೊಬ್ಬ ವ್ಯಕ್ತಿಗೂ ಈ ಮೂವರು ವಂಚನೆ ಮಾಡಿದ್ದರು. ಈ ಸಂಬಂಧ ಪೊಲೀಸರು ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ