ಪಾಕ್ ಆಕ್ರಮಿತ ಕಾಶ್ಮಿರ ಹಿಂಪಡೆಯುವ ಸಮಯ ಬಂದಿದೆ: ಬಾಬಾ ರಾಮಂದೇವ್

ಶನಿವಾರ, 10 ಜೂನ್ 2017 (16:06 IST)
ಪಾಕಿಸ್ತಾನದಿಂದ ಪಾಕ್ ಆಕ್ರಮಿತ ಕಾಶ್ಮಿರವನ್ನು ವಾಪಸ್ ಪಡೆಯುವ ಸಮಯ ಬಂದಿದೆ ಎಂದು ಯೋಗಾ ಗುರು ಬಾಬಾ ರಾಮದೇವ್ ಮೋದಿ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
 
ಪಾಕ್ ಆಕ್ರಮಿತ ಕಾಶ್ಮಿರದಿಂದಲೇ ಕಾಶ್ಮಿರದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ. ಪ್ರಧಾನಿ ಮೋದಿ ಪಾಕ್ ಆಕ್ರಮಿತ ಕಾಶ್ಮಿರವನ್ನು ಹಿಂಪಡೆಯುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. 
 
ಜಮ್ಮು ಕಾಶ್ಮಿರದಲ್ಲಿನ ಮೂಲ ಸಮಸ್ಯೆಗಳಿಗೆ ಪಿಓಕೆ ಮೂಲ ಕಾರಣವಾಗಿದೆ. ಪಾಕ್ ಆಕ್ರಮಿತ ಕಾಶ್ಮಿರವನ್ನು ಹಿಂಪಡೆದಲ್ಲಿ ಉಗ್ರರನ್ನು ದೇಶದೊಳಗೆ ನುಗ್ಗಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
 
ಪ್ರಧಾನಿ ಮೋದಿ ಹಂತ ಹಂತವಾಗಿ ಪಿಓಕೆಯನ್ನು ಭಾರತದೊಳಗೆ ಸೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
 
ಮೋತಿಹಾರಿ ಜಿಲ್ಲೆಯಲ್ಲಿ ಯೋಗಾ ಕ್ಯಾಂಪ್ ನಡೆಸುತ್ತಿರುವ ಬಾಬಾ ರಾಮದೇವ್, ಪಿಓಕೆ ಹೊರತುಪಡಿಸಿ, ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು 1993 ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ವಿರುದ್ಧ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. 
 
ದಾವೂದ್ ಇಬ್ರಾಹಿಂ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ದೇಶಕ್ಕೆ ಸಮಸ್ಯೆಯಾಗಿ ಪರಿಣಮಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ನಿರ್ಮೂಲನೆ ಮಾಡಬೇಕು ಇಲ್ಲವೇ ದೇಶಕ್ಕೆ ವಾಪಸ್ ತರಬೇಕು ಎಂದು ಯೋಗಾ ಗುರು ಬಾಬಾ ರಾಮದೇವ್ ಆಗ್ರಹಿಸಿದ್ದಾರೆ. 


ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ