ಪ್ರಧಾನಿ ಮೋದಿ ಹಟಾವೋ, ದೇಶ ಬಚಾವೋ: ಮಮತಾ ಬ್ಯಾನರ್ಜಿ ಘೋಷಣೆ

ಶುಕ್ರವಾರ, 23 ಡಿಸೆಂಬರ್ 2016 (10:18 IST)
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನೋಟು ನಿಷೇಧ ಬಹುದೊಡ್ಡ ಹಗರಣವಾಗಿದೆ. ಜನೆವರಿ 1 ರಿಂದ ದೇಶಾದ್ಯಂತ ಮೋದಿ ಹಟಾವೋ ದೇಶ ಬಚಾವೋ ಘೋಷಣೆಯೊಂದಿಗೆ ಹೋರಾಟ ಆರಂಭಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
 
ದೇಶದಲ್ಲಿ ಕೋಮುವಾದ ಹರಡಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿರುವ ವ್ಯಕ್ತಿಯ ಕೈಯಲ್ಲಿ ದೇಶ ಸುರಕ್ಷಿತವಾಗಿರುವುದಿಲ್ಲ ಎನ್ನುವುದು ಖಾತರಿಯಾಗಿದ್ದರಿಂದ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳೆಗಿಳಿಯುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ಇದೀಗ ಅಲಿಬಾಬಾ ಮತ್ತು ಅವರ ನಾಲ್ಕು ಆತ್ಮಿಯ ಬಳಗದ ಸದಸ್ಯರು ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವರಿಗೂ ನೋಟು ನಿಷೇಧ ಗೊತ್ತಿಲ್ಲ. ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ದೇವರೇ ಬಲ್ಲ. ಅಲಿಬಾಬಾ ಮತ್ತು ಆತನ ಸಹಚರರು ಜನತೆ, ದೇಶ ಮತ್ತು ತಮ್ಮದೇ ಪಕ್ಷವನ್ನು ವಿನಾಶದತ್ತ ಕೊಂಡೊಯುತ್ತಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಪ್ರಧಾನಿ ಮೋದಿಯವರ ಕ್ಯಾಶ್‌ಲೆಸ್ ಎಕಾನಾಮಿ ಮುಂಗೇರಿಲಾಲ್ ಕೇ ಹಸೀನ್ ಸ್ವಪ್ನೆ ಎನ್ನುವಂತಾಗಿದೆ. ಕಪ್ಪು ಹಣ ಹೊಂದಿದವರಿಗೆ ಮೋದಿ ಸರಕಾರ ಪರೋಕ್ಷವಾಗಿ ಉತ್ತಮ ಬೆಂಬಲ ನೀಡುತ್ತಿದೆ.
 
ಜನೆವರಿ 1 ರಿಂದ 8 ರವರೆಗೆ ರಾಜ್ಯಾದ್ಯಂತ ಮೋದಿ ಹಟಾವೋ ಮತ್ತು ದೇಶ ಬಚಾವೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು
 
ಬ್ಯಾಂಕ್‌ಗಳಲ್ಲಿ ಹಣದ ಕೊರತೆಯಿರುವುದನ್ನು ಟೀಕಿಸಿದ ಅವರು, ಅರ್ಹತೆಯಿಲ್ಲದ ವ್ಯಕ್ತಿಯಿಂದ ದೇಶದ ನಾಯಕತ್ವ ನಿಭಾಯಿಸಲು ಸಾಧ್ಯವಿಲ್ಲ. ನೋಟು ನಿಷೇಧದಿಂದಾಗಿ ದೇಶದಲ್ಲಿ ಆರ್ಥಿಕತೆ ವಿನಾಶದತ್ತ ಸಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ