ತಮಿಳುನಾಡು: 89 ಡಿಎಂಕೆ ಶಾಸಕರನ್ನು ಅಮಾನತ್ತುಗೊಳಿಸಿದ ಸಭಾಪತಿ

ಬುಧವಾರ, 17 ಆಗಸ್ಟ್ 2016 (17:53 IST)
ಎಐಎಡಿಎಂಕೆ ಶಾಸಕ ಡಿಎಂಕೆ ವಿಪಕ್ಷ ನಾಯಕ ಸ್ಟಾಲಿನ್‌ರನ್ನು ನಮ್ಮಕು ನಾಮೇ ರೋಡ್ ಕಾರ್ಯಕ್ರಮ ಕುರಿತಂತೆ ಲೇವಡಿ ಮಾಡಿದ್ದರಿಂದ ಆಕ್ರೋಶಗೊಂಡ ಡಿಎಂಕೆ ಶಾಸಕರು, ಸದನದಲ್ಲಿ ಕೋಲಾಹಲ ವೆಬ್ಬಿಸಿದ್ದರಿಂದ ಸಭಾಪತಿ ಎಲ್ಲಾ ಡಿಎಂಕೆ ಶಾಸಕರನ್ನು ಅಮಾನತ್ತುಗೊಳಿಸಿದ್ದಾರೆ.
 
ಸದನದ ಕಲಾಪಕ್ಕೆ ನಿರಂತರವಾಗಿ ಅಡ್ಡಿಪಡಿಸುತ್ತಿರುವುದರಿಂದ ಡಿಎಂಕೆ ಪಕ್ಷದ ಸದಸ್ಯರನ್ನು ಅಮಾನತ್ತುಗೊಳಿಸಬೇಕು ಎಂದು ಹಣಕಾಸು ಖಾತೆ ಸಚಿವ ಒ.ಪನ್ನೀರ್ ಸೆಲ್ವಂ ನಿರ್ಣಯ ಮಂಡಿಸಿದರು. ನಿರ್ಣಯವನ್ನು ಸ್ವೀಕರಿಸಿದ ಸಭಾಪತಿಗಳು ವಾರದ ಅವಧಿಗೆ ಶಾಸಕರನ್ನು ಅಮಾನತ್ತುಗೊಳಿಸಿದರು. 
 
ವಿಧಾನಸಭೆಯ ಹೊರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, ಮುಖ್ಯಮಂತ್ರಿ ಜೆ.ಜಯಲಲಿತಾ ಹೊಂದಿರುವ ಗೃಹ ಖಾತೆಯ ಅನುದಾನ ಕುರಿತಂತೆ ನಡೆಯಲಿರುವ ಸಭೆಯಲ್ಲಿ ಡಿಎಂಕೆ ಪ್ರಶ್ನೆಗಳನ್ನು ಎತ್ತದಂತೆ ಮಾಡಲು ಸರಕಾರ ಡಿಎಂಕೆ ಶಾಸಕರನ್ನು ಅಮಾನತ್ತುಗೊಳಿಸಿದೆ ಎಂದು ಆರೋಪಿಸಿದರು.
 
ಅಧಿಕಾರರೂಢ ಪಕ್ಷದ ಶಾಸಕರು ಮತ್ತು ಸಚಿವರು ಅನಗತ್ಯವಾಗಿ ಡಿಎಂಕೆ ಶಾಸಕರನ್ನು ಪ್ರಚೋದಿಸುತ್ತಿದ್ದಾರೆ ಎಂದು ಡಿಎಂಕೆ ಮುಖಂಡ ಮಾಜಿ ಉಪ ಮುಖ್ಯಮಂತ್ರಿ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ