ಪ್ರಧಾನಿ ಮೋದಿ ಕಚೇರಿ ಬಳಿ ನಗ್ನರಾಗಿ ಪ್ರತಿಭಟಿಸಿದ ತಮಿಳುನಾಡು ರೈತರು

ಸೋಮವಾರ, 10 ಏಪ್ರಿಲ್ 2017 (17:01 IST)
ಕೇಂದ್ರ ಸರಕಾರ ಕೂಡಲೇ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ತಮಿಳುನಾಡು ರಾಜ್ಯದ ರೈತರು ಇಂದು ಪ್ರಧಾನಮಂತ್ರಿ ಕಚೇರಿಯ ಬಳಿ ನಗ್ನರಾಗಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. 
 
ಕಳೆದ ಮೂರು ವಾರಗಳಿಂದ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಒಂದು ವೇಳೆ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.  
 
ಕಳೆದ ಶುಕ್ರವಾರದಂದು ಮಹಿಳೆ ಸೇರಿದಂತೆ ಐವರು ರೈತರು ತಮ್ಮ ಕೈಗಳನ್ನು ಕತ್ತರಿಸಿಕೊಂಡಿದ್ದು,  ರೈತರ ಸಾಲ ಮನ್ನಾ ಮಾಡುವ ಬಗ್ಗೆ ಕಂದ್ರ ಸರಕಾರ ಯೋಚಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಕಳೆದ ಕೆಲ ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಯಾರೂ ಕ್ಯಾರೆ ಎನ್ನಲಿಲ್ಲ. ನಮ್ಮ ರಾಜ್ಯದ ಅನೇಕ ಸಂಸದರು ಇಲ್ಲಿಗೆ ಬಂದು ಭರವಸೆ ಕೊಟ್ಟು ಮಾಯವಾಗುತ್ತಾರೆ. ಕೈಗಳನ್ನು ಕತ್ತರಿಸಿಕೊಂಡು ರಕ್ತವನ್ನು ಕೂಡಾ ಕೊಟ್ಟಿದ್ದೇವೆ. ಕೇಂದ್ರ ಸರಕಾರಕ್ಕೆ ಮತ್ತಷ್ಟು ಕೊಡಲು ನಮ್ಮ ಬಳಿ ಏನು ಉಳಿದಿಲ್ಲ ಎಂದಿದ್ದಾರೆ.
 
ಪ್ರತಿಭಟನೆಯಲ್ಲಿ ನಿರತರಾಗಿರುವ ಕೆಲ ರೈತರಿಗೆ ಬಿಸಿಗಾಳಿಯ ಪ್ರಭಾವದಿಂದ ಅನಾರೋಗ್ಯ ಕಾಡುತ್ತಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಹಲವು ರಾಷ್ಟ್ರೀಯ ನಾಯಕರು ಮತ್ತು ಸ್ಥಳೀಯ ನಾಯಕರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ