ನಾಳೆ ಐಟಿ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನ
ಈ ಹಿಂದಿನ 2 ವರ್ಷಗಳಲ್ಲಿ ವೆಬ್ಸೈಟ್ ಸಮಸ್ಯೆ, ಕೋವಿಡ್ ಅಲೆ ಇತ್ಯಾದಿ ಕಾರಣಗಳಿಂದ ರಿಟರ್ನ್ ಸಲ್ಲಿಕೆಯ ಅವಧಿಯನ್ನು ಹಲವು ಬಾರಿ ವಿಸ್ತರಣೆ ಮಾಡಲಾಗಿತ್ತು.
ಕಳೆದ ವರ್ಷ ಡಿ.31 ಅಂತಿಮ ಡೆಡ್ಲೈನ್ ನೀಡಲಾಗಿತ್ತು. ಆದರೆ ಈ ವರ್ಷ ಗಡುವು ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ.
ಜು.31ರ ಬಳಿಕವೂ ಸಲ್ಲಿಕೆ ಮಾಡಲು ಅವಕಾಶ ಇದೆಯಾದರೂ ದಂಡ ಪಾವತಿಸಬೇಕಾಗುತ್ತದೆ.