ಟ್ರಿಪಲ್ ತಲಾಖ್ ಮುಸ್ಲಿಮರ ಆಂತರಿಕ ವಿಷಯ: ಆರ್‌ಎಸ್ಎಸ್

ಬುಧವಾರ, 26 ಅಕ್ಟೋಬರ್ 2016 (19:01 IST)
ಟ್ರಿಪಲ್ ತಲಾಖ್ ಸಂಬಂಧಿಸಿದಂತೆ ದೇಶಾದ್ಯಂತ ಪರ ವಿರೋಧಗಳು ವ್ಯಕ್ತವಾಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಟ್ರಿಪಲ್ ತಲಾಖ್ ಮುಸ್ಲಿಮರ ಆಂತರಿಕ ವಿಷಯ, ಆದರೆ ಇಂತಹ ಲಿಂಗ ತಾರತಮ್ಯಗಳನ್ನು ವಿರೋಧಿಸುವುದಾಗಿ ಹೇಳಿದೆ. 
ಅಖಿಲ ಭಾರತ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನ್ನಾಡುತ್ತಿದ್ದ ಸಂಘದ ಪ್ರಧಾನ ಕಾರ್ಯದರ್ಶಿ, ಸುರೇಶ್ ಜೋಷಿ,  ನ್ಯಾಯ ಬಯಸಿರುವ ಮುಸ್ಲಿಂ ಮಹಿಳೆಯರು ಕೋರ್ಟ್ ಮೆಟ್ಟಿಲೇರಿದ್ದಾರೆ. ಆಧುನಿಕ ಕಾಲದಲ್ಲಿ ಯಾವುದೇ ರೀತಿಯ  ಲಿಂಗ ತಾರತಮ್ಯ ಸರಿಯಲ್ಲ. ಅವರಿಗೆ ನ್ಯಾಯ ಸಿಗಲೆಂದು ನಾವು ಹಾರೈಸುತ್ತೇವೆ. ಕೋರ್ಟ್ ಈ ಸಮಸ್ಯೆಯನ್ನು ದಯಾದ್ರ ಹೃದಯದಿಂದ ನೋಡಬೇಕು ಎಂದು ಹೇಳಿದ್ದಾರೆ. 
 
ಇದೇ ವೇಳೆ ರಾಮ ಮಂದಿರದ ಬಗ್ಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಪ್ರತಿಯೊಬ್ಬ ಹಿಂದೂವಿನ ಆಶಯವಾಗಿದೆ, ಇದನ್ನು ನನಸಾಗಿಸಲು ಕಾನೂನಾತ್ಮಕ ತೊಡಕುಗಳನ್ನು ಪರಿಹರಿಸಿಕೊಳ್ಳಬೇಕು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ