ತ್ರಿವಳಿ ತಲಾಖ್: ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿ

ಮಂಗಳವಾರ, 22 ಆಗಸ್ಟ್ 2017 (10:53 IST)
ನವದೆಹಲಿ: ತ್ರಿವಳಿ ತಲಾಖ್ ನ್ನು ಕಾನೂನು ವ್ಯಾಪ್ತಿಗೆ ತರಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಇದೀಗ ಚೆಂಡು  ಕೇಂದ್ರ ಸರ್ಕಾರದ ಅಂಗಳದಲ್ಲಿದೆ.


ತ್ರಿವಳಿ ತಲಾಖ್ ನ್ನು ನಿಷೇಧಿಸದೇ, ಮುಸ್ಲಿಂ ಧಾರ್ಮಿಕ ಕಾನೂನಿಗೆ ಧಕ್ಕೆಯಾಗದ ರೀತಿಯಲ್ಲಿ ಕೇಂದ್ರ ಸರ್ಕಾರ ಹೊಸ ಕಾನೂನು ತರಬೇಕಿದೆ.

ಅದಕ್ಕೆ ಹೊಸ ಕಾನೂನನ್ನು ರೂಪಿಸಿ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆಯಬೇಕಿದೆ. ಇದೀಗ 6 ತಿಂಗಳ ಮಟ್ಟಿಗೆ ತ್ರಿವಳಿ ತಲಾಖ್ ಗೆ ನಿಷೇಧಿಸಲಾಗಿದೆ. ಈ ಆರು ತಿಂಗಳ ಅವಧಿಯೊಳಗೆ ಕೇಂದ್ರ ಹೊಸ ಕಾನೂನು ರೂಪಿಸಬೇಕು.

ಆ ನಂತರ ಜಾರಿಗೆ ಬರುವ ಕಾನೂನು ವ್ಯಾಪ್ತಿಗೆ ತ್ರಿವಳಿ ತಲಾಖ್ ಬರಲಿದ್ದು, ಆ ಪ್ರಕಾರ ಮುಂದಿನ ದಿನಗಳಲ್ಲಿ ತಲಾಖ್ ಜಾರಿಗೆ ಬರಲಿದೆ. ಆದರೆ ಕಾನೂನು ರೂಪಿಸುವಾಗ ಮಹಿಳೆಯರಿಗೆ ಅನ್ಯಾಯವಾಗದ ರೀತಿಯಲ್ಲಿ ಕಾನೂನು ರೂಪಿಸಬೇಕಾದ ಜವಾಬ್ಧಾರಿ ಇದೀಗ ಕೇಂದ್ರದ ಮೇಲಿದೆ.

ಇದನ್ನೂ ಓದಿ.. ತ್ರಿವಳಿ ತಲಾಖ್: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಏನಿದೆ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ