ಆಕ್ಸಿಡೆಂಟ್ ಆದ ಟ್ರಕ್ ನಲ್ಲಿ ಸಿಲುಕಿದ ಚಾಲಕ, ಕಣ್ಣೆದುರೇ ಬೆಂಕಿಗೆ ಆಹುತಿಯಾದ ಭೀಕರ ಕ್ಷಣ Video

Krishnaveni K

ಸೋಮವಾರ, 13 ಏಪ್ರಿಲ್ 2026 (13:57 IST)
Photo Credit: X
ಸೋನ್ ಭದ್ರ: ಆಕ್ಸಿಡೆಂಟ್ ಆದ ಟ್ರಕ್ ನಲ್ಲಿ ಸಿಲುಕಿದ ಚಾಲಕ ಕಾಪಾಡಿ ಎಂದು ಕೂಗುತ್ತಿದ್ದರೂ ಸಹಾಯ ಮಾಡಲಾಗದೇ ಜನ ಅಸಹಾಯಕರಾಗಿ ನಿಂತಿದ್ದರೆ ಆತ ಕಣ್ಣೆದುರೇ ಬೆಂಕಿಗೆ ಆಹುತಿಯಾದ ಭೀಕರ ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಸೋನ್ ಭದ್ರದ ರೇಣುಕೂಟ್ ನಲ್ಲಿ ಈ ಘಟನೆ ನಡೆದಿದೆ. ಅಪಘಾತವಾದಾಗ ಸಾವು ನೋವುಗಳಾಗುವುದು ಸಹಜ. ಆದರೆ ಇಲ್ಲಿ ಸಾಕಷ್ಟು ಜನರಿದ್ದರೂ ಓರ್ವ ಚಾಲಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣವೂ ಇದೆ.

ರೇಣುಕೂಟ್ ನಲ್ಲಿ ಎರಡು ಟ್ರಕ್ ಗಳ ನಡುವೆ ಭೀಕರ ಅಪಘಾತವಾಗಿತ್ತು. ಬೃಹತ್ ಗಾತ್ರದ ಟ್ರಕ್ ಗಳೆರಡು ಎದುರು ಬದರಾಗಿ ಢಿಕ್ಕಿ ಹೊಡೆದಿದ್ದವು. ಪರಿಣಾಮ ಟ್ರಕ್ ಗಳಿಗೆ ಕ್ಷಣಾರ್ಧದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಒಂದು ಟ್ರಕ್ ನಲ್ಲಿ ಚಾಲಕ ಸಿಲುಕಿಕೊಂಡಿದ್ದ.

ಆತನ ಕಾಲುಗಳಿಗೆ ಸ್ಟೀರಿಂಗ್ ವೀಲ್ ನ ಮೆಟಲ್ ಚುಚ್ಚಿ ಕಾಲು ಲಾಕ್ ಆಗಿತ್ತು. ಹೀಗಾಗಿ ಆತನಿಗೆ ಹೊರಗೆ ಬರಲಾಗುತ್ತಿರಲಿಲ್ಲ. ಹೊರಗೆ ಸಾಕಷ್ಟು ಜನರಿದ್ದರೂ ಅವರಿಂದಲೂ ಆತನನ್ನು ಹೊರಗೆ ಎಳೆಯಲು ಸಾಧ್ಯವಾಗುತ್ತಿರಲಿಲ್ಲ. ಆತ ಹೇಗೋ ಹರಸಾಹಸ ಮಾಡಿ ಹೊರಗೆ ಬರಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾನೆ. ಆದರೆ ಅಷ್ಟರಲ್ಲಿ ಅಗ್ನಿ ಸ್ಪೋಟಗೊಂಡಿದ್ದು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಜೀವ ಕಳೆದುಕೊಂಡಿದ್ದಾನೆ. ಈ ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ.

pic.twitter.com/JwBYPWkuhL

 

— ثيو (@1Thio_) April 12, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ