ಚುನಾವಣಾ ಚಿಹ್ನೆ ಪ್ರಕರಣ: ಟಿಟಿವಿ ದಿನಕರನ್ ಗೆ ಜಾಮೀನು

ಗುರುವಾರ, 1 ಜೂನ್ 2017 (16:28 IST)
ನವದೆಹಲಿ: ಎಐಎಡಿಎಂಕೆ ಚುನಾವಣಾ ಚಿಹ್ನೆ ಉಳಿಸಿಕೊಳ್ಳಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣದಲ್ಲಿ ಟಿಟಿವಿ ದಿನಕರನ್ ಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ.

 
ದೆಹಲಿಯ ನ್ಯಾಯಾಲಯ ದಿನಕರನ್ ಗೆ 5 ಲಕ್ಷ ಬಾಂಡ್ ಸಹಿತ ಷರತ್ತು ಬದ್ಧ ಜಾಮೀನು ನೀಡಿದೆ. ಕಳೆದ ತಿಂಗಳು ದಿನಕರನ್ ದೆಹಲಿ ಪೊಲೀಸರಿಗೆ ಶರಣಾಗಿದ್ದರು.

ದಿನಕರನ್ ಲಂಚ ನೀಡಲು ಬೆಂಗಳೂರಿನ ವ್ಯಕ್ತಿ ಸುಕೇಶ್ ಎಂಬಾತ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿತ್ತು. ಇದೀಗ ಶಶಿಕಲಾ ನಟರಾಜನ್ ಆಪ್ತ ಸದ್ಯಕ್ಕೆ ನಿರಾಳರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ