10 ರೂ. ಕೊಡಲಿಲ್ಲವೆಂದು ಗೆಳೆಯನ ಜೀವ ತೆಗೆದ ಪಾಪಿಗಳು!
ಮೂವರು ಗೆಳೆಯರು ಮದ್ಯದಂಗಡಿಗೆ ತೆರಳಿದ್ದರು. ಆರೋಪಿಗಳಾದ ಇಬ್ಬರು ಗೆಳೆಯರು 10 ರೂ. ಕೊಡಲು ಕೇಳಿದಾಗ ವ್ಯಕ್ತಿ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಮದ್ಯದಂಗಡಿಯಿಂದ ಹೊರಬರುತ್ತಲೇ ದಾಳಿ ಮಾಡಿದ್ದಾರೆ.
ತೀವ್ರ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.