ಶಾಲಾ ಶುಲ್ಕ ನೀಡದಿದ್ದರಿಂದ ಇಬ್ಬರು ವಿದ್ಯಾರ್ಥಿನಿಯರನ್ನು ನಗ್ನಗೊಳಿಸಿದ ಶಾಲಾ ಶಿಕ್ಷಕಿ

ಶನಿವಾರ, 17 ಜೂನ್ 2017 (19:09 IST)
ಬಿಹಾರದ ಬೇಗುಸಾಯಿ ಜಿಲ್ಲೆಯಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಸಮವಸ್ತ್ರಗಳಿಗೆ ಹಣ ಪಾವತಿಸಲು ವಿಫಲವಾಗಿರುವುದರಿಂದ ಆಕ್ರೋಶಗೊಂಡ ಶಿಕ್ಷಕಿಯೊಬ್ಬಳು ಒತ್ತಾಯಪೂರ್ವಕವಾಗಿ ಅವರ ಬಟ್ಟೆಯನ್ನು ಬಿಚ್ಚಿ ನಗ್ನಗೊಳಿಸಿದ ಘಟನೆ ವರದಿಯಾಗಿದೆ.
 
ಜಿಲ್ಲೆಯ ವೀರ್ಪುರ್ ಗ್ರಾಮದ ಬಡ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿನಿಯರು ಸಹೋದರಿಯರಾಗಿದ್ದಾರೆ.
 
ಬಾಲಕಿಯರ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕಿ ಅಂಜನಾ ಕುಮಾರಿ ಮತ್ತು ಶಾಲೆಯ ನಿರ್ದೇಶಕ ಎನ್‌.ಕೆ.ಝಾ ಎನ್ನುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಮಿಶ್ರಾ ತಿಳಿಸಿದ್ದಾರೆ. 
 
ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪುತ್ರಿಯರನ್ನು ಶಾಲೆಯಿಂದ ಕರೆದುಕೊಂಡು ಬರಲು ತಂದೆ ಹೋಗಿದ್ದಾಗ ಕಿರಿಯ ಪುತ್ರಿ ಶಿಕ್ಷಕಿ ಅಂಜನಾ ಕುಮಾರಿ ನಿಮ್ಮನ್ನು ಭೇಟಿಯಾಗಲು ಬಯಸಿದ್ದಾಳೆ ಎಂದು ಹೇಳಿದ್ದಾಳೆ. ಶಿಕ್ಷಕಿ ಕುಮಾರಿಯನ್ನು ಭೇಟಿ ಮಾಡಲು ಹೋದಾಗ ಸಮವಸ್ತ್ರದ ಹಣವನ್ನು ಪಾವತಿಸುವಂತೆ ತಿಳಿಸಿದ್ದಾಳೆ. ಜೂನ್ ತಿಂಗಳೊಳಗಾಗಿ ಹಣವನ್ನು ಪಾವತಿಸುವುದಾಗಿ ಮನವಿ ಮಾಡಿದರೂ ನನ್ನ ಎದುರಿಗೆ ಪುತ್ರಿಯರ ಬಟ್ಟೆ ಬಿಚ್ಚಿ ಅರೆನಗ್ನಗೊಳಿಸಿದ್ದಾಲೆ. ಶಾಲೆಯ ನಿರ್ದೇಶಕರ ಬಳಿ ತೆರಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅರೆನಗ್ನಾವಸ್ಥೆಯಲ್ಲಿಯೇ ಪುತ್ರಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಗದರಿದ್ದಾಗಿ ತಿಳಿಸಿದ್ದಾರೆ. 
 
ರಾಜ್ಯದ ಶಿಕ್ಷಣ ಖಾತೆ ಸಚಿವ ಅಶೋಕ್ ಚೌಧರಿ ಘಟನೆಯನ್ನು ಖಂಡಿಸಿ, ಪ್ರಕರಣದ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.


ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ