ಬರ್ತ್ ಡೇ ದಿನ ಫೈರಿಂಗ್ ಮಾಡಿ ಜೈಲು ಪಾಲಾದ
ಬರ್ತ್ ಡೇ ಪಾರ್ಟಿ ವೇಳೆ ಬಾಲಕ ಪರವಾನಗಿ ರಹಿತ ಅಕ್ರಮ ಪಿಸ್ತೂಲ್ ನಿಂದ ಗುಂಡು ಹಾರಿಸಿ ಮೋಜು ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.
ಇದನ್ನು ಗಮನಿಸಿದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಬರ್ತ್ ಡೇ ಆಚರಿಸಿಕೊಂಡಿದ್ದ ಬಾಲಕ ಮತ್ತು ಜೊತೆಯಲ್ಲಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದೀಗ ಇವರಿಗೆ ಪಿಸ್ತೂಲ್ ಬಂದಿದ್ದು ಹೇಗೆ ಎಂಬ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.