ಮಹಾರಾಷ್ಟ್ರ ಸರಕಾರ ಪತನಕ್ಕೆ ಕ್ಷಣಗಣನೆ: ಸುಳಿವು ನೀಡಿದ ಶಿವಸೇನೆ ಸಚಿವ!

ಬುಧವಾರ, 22 ಜೂನ್ 2022 (14:40 IST)

ಅಪರೇಷನ್‌ ಕಮಲದಿಂದ ಬಂಡಾಯ ಘೋಷಿಸಿರುವ ಶಾಸಕರನ್ನು ಓಲೈಸಲು ವಿಫಲವಾಗಿರುವ ಶಿವಸೇನೆ ಮಹಾರಾಷ್ಟ್ರ ವಿಧಾನಸಭೆಯನ್ನು ವಿಸರ್ಜಿಸುವ ಸಾಧ್ಯತೆ ಇದೆ.

ವಿಧಾನಷರಿಷತ್‌ ನಲ್ಲಿ ಬಿಜೆಪಿ ಪರ ಅಡ್ಡಮತದಾನ ಮಾಡಿದ ಶಿವಸೇನೆಯ ಶಾಸಕರು ಗುಜರಾತ್‌ ನ ಹೋಟೆಲ್‌ ನಲ್ಲಿ ತಲೆಮರೆಸಿಕೊಂಡಿದ್ದಾರೆ. ಆದರೆ ಶಿವಸೇನೆ ಶಾಸಕರು ಹಾಗೂ ಸಚಿವರ ಒಂದು ತಂಡ ಬಂಡಾಯ ಶಾಸಕರನ್ನು ಭೇಟಿ ಮಾಡಿ ಮಾತುಕತೆ ಮಾಡಿ ರಾಜೀ ಸಂಧಾನ ಮಾಡಲು ಯತ್ನಿಸಿದ್ದು, ವಿಫಲವಾಗಿದೆ ಎನ್ನಲಾಗಿದೆ.

ಬಂಡಾಯ ಘೋಷಿಸಿರುವ ಏಕಾಂತ್‌ ಶಿಂಧೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುತ್ತಿದ್ದಂತೆ ತಮಗೆ 46 ಮತ್ತು 6 ಪಕ್ಷೇತರ ಶಾಸಕರ ಬೆಂಬಲವಿದೆ ಎಂದು ಅವರು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಸಚಿವ ಸಂಜಯ್‌ ರಾವತ್‌ ವಿಧಾನಸಭೆ ವಿಸರ್ಜನೆಯ ಸುಳಿವು ನೀಡಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿರುವುದರಿಂದ ಅವರು ಅಖಾಡದಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದಾಗಿ ಶಿವಸೇನೆ ಸುಳಿವು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ