ಭೂಗತ ದೊರೆ ದಾವೂದ್ ಇಬ್ರಾಹಿಂ ಸಹೋದರ ಹುಮಾಯೂನ್ ಕಸ್ಕರ್ ಸಾವು

ಶುಕ್ರವಾರ, 24 ಜೂನ್ 2016 (20:26 IST)
ಭೂಗತ ದೊರೆ ದಾವೂದ್ ಇಬ್ರಾಹಿಂ ಕಿರಿಯ ಸಹೋದರ ಹುಮಾಯೂನ್ ಕಸ್ಕರ್ ಇಂದು ಪಾಕಿಸ್ತಾನದ ಕರಾಚಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. 
 
40 ವರ್ಷ ವಯಸ್ಸಿನ ಹುಮಾಯೂನ್ ಕಸ್ಕರ್ ಕ್ಯಾನ್ಸರ್‌‍ನಿಂದ ಬಳಲುತ್ತಿದ್ದು ಇಂದು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ಪಾಕಿಸ್ತಾನದ ಬಂದರು ನಗರವಾದ ಕರಾಚಿಯಲ್ಲಿ ವಾಸಿಸುತ್ತಿದ್ದ ಹುಮಾಯೂನ್ ಕಸ್ಕರ್ 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರಲಿಲ್ಲ. ಸಣ್ಣಪುಟ್ಟ ಅಪರಾಧಗಳಲ್ಲಿ ಅಪರಾಧಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.  
 
ಹುಮಾಯೂನ್ ಕಸ್ಕರ್ ನೇಪಾಳ ಮಾರ್ಗವಾಗಿ ಪಾಕಿಸ್ತಾನಕ್ಕೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ನಂತರ ಪಾಕಿಸ್ತಾನದಲ್ಲಿಯೇ ವಾಸಿಸಲು ಆರಂಭಿಸಿದ್ದ ಎಂದು ಮಾಧ್ಯಮಗಳ ಮೂಲಗಳು ತಿಳಿಸಿವೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ