ಕೇಂದ್ರ ಬಜೆಟ್ 2017-18 ಲೈವ್

ಬುಧವಾರ, 1 ಫೆಬ್ರವರಿ 2017 (10:44 IST)
ಜೇಟ್ಲಿ ಮಂಡಿಸುತ್ತಿರುವ ಬಜೆಟ್ ಮುಖ್ಯಾಂಶಗಳು: 

*ಬಜೆಟ್' ಮಂಡನೆಯನ್ನು  ಫೆಬ್ರವರಿ 3ಕ್ಕೆ ಮುಂದೂಡಿದ ಜೇಟ್ಲಿ

*3 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರಕ್ಕೆ ನಿರ್ಬಂಧ, 3 ಲಕ್ಷಕ್ಕಿಂತ ಮೇಲ್ಪಟ್ಟ ವ್ಯವಹಾರ ಬ್ಯಾಂಕ್ ಮೂಲಕವೇ ನಡೆಯಬೇಕು.

* ಎಲ್ಲ ಸರ್ಕಾರಿ ಸಂಸ್ಥೆಗಳಲ್ಲೂ ಡಿಜಿಟಲ್ ಪಾವತಿ ಕಡ್ಡಾಯ, ನಿವೃತ್ತ ಯೋಧರಿಗೆ ಆನ್​ಲೈನ್ ಪಿಂಚಣಿ ನೀಡಿಕೆ, ಅಂಚೆ ಕಚೇರಿಗಳಲ್ಲಿ ಪಾಸ್​ಪೋರ್ಟ್ ಸೌಲಭ್ಯ, ಆಧಾರ್ ಆಧಾರಿತ 20 ಲಕ್ಷ ಕಾರ್ಡ್​ ಸ್ವೈಪಿಂಗ್ ಯಂತ್ರ ಸರ್ಕಾರಿ ಇಲಾಖೆ ಸಂಪೂರ್ಣ ಡಿಜಿಟಲ್ ,
ಡಿಜಿಟಲ್ ಕ್ರಾಂತಿ - 10 ಲಕ್ಷ ಪಿ​ಓಎಸ್​​ಗಳ ಸ್ಥಾಪನೆ, ಗ್ರಾಮೀಣ ಪ್ರದೇಶಗಳಲ್ಲಿ ಪಿಓಎಸ್​ಗಳ ಸ್ಥಾಪನೆ ಭೀಮಾ ಆ್ಯಪ್ ಬಳಕೆದಾರರಿಗೆ ಬೋನಸ್ , ರೈಲ್ವೇ ಟಿಕೆಟ್ ರಿಯಾಯಿತಿಗೆ ಆಧಾರ್ ಕಾರ್ಡ್​ ಕಡ್ಡಾಯ
 
*ರಾಜಕೀಯ ಪಕ್ಷಗಳಿಗೆ ಶಾಕ್- ದೇಣಿಗೆ ಪಡೆಯುವಿಕೆಗೆ ನಿಯಮಗಳು; ಒಬ್ಬ ವ್ಯಕ್ತಿಯಿಂದ 2ಸಾವಿರ ಚಂದಾ ಮಾತ್ರ ನಗದಿನಲ್ಲಿ ಪಡೆಯಬಹುದು, ಅದಕ್ಕಿಂತ ಹೆಚ್ಚಿನ ದೇಣಿಗೆ ಚೆಕ್ ಅಥವಾ ಡಿಜಿಟಲ್ ವ್ಯವಹಾರದ ಮೂಲಕ ಮಾತ್ರ ಪಡೆಯಬಹುದು. 2 ಸಾವಿರಕ್ಕಿಂತ ಹೆಚ್ಚು ದೇಣಿಗೆ ಪಡೆದರೆ ದಾಖಲೆ ನೀಡಬೇಕು.

*ಆಂಧ್ರಕ್ಕೆ ಬಂಪರ್ : ರಾಜಧಾನಿ ಅಮರಾವತಿ ಅಭಿವೃದ್ಧಿಗೆ, ಅಮರಾವತಿಗೆ, 3 ವರ್ಷದ ವರೆಗೆ ತೆರಿಗೆ ರಿಯಾಯಿತಿ ಘೋಷಣೆ

*50 ಕೋಟಿ ವಹಿವಾಟು ಕಂಪನಿಗಳಿಗೆ 25% ರಷ್ಟು ತೆರಿಗೆ

*ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಡಿಜಿಟಲ್ ಪಾವತಿ ಕಡ್ಡಾಯ
 
*ರಕ್ಷಣಾ ವಲಯಕ್ಕೆ 2.74 ಲಕ್ಷ ಕೋಟಿ ಅನುದಾನ 
 

*3 ಲಕ್ಷದವರೆಗೆ - ತೆರಿಗೆ ಇಲ್ಲ, 3 ಲಕ್ಷದಿಂದ 5 ಲಕ್ಷ - ಶೇ. 10 ತೆರಿಗೆ, 5 ಲಕ್ಷದಿಂದ 10 ಲಕ್ಷ - ಶೇ. 20 ತೆರಿಗೆ, 10 ಲಕ್ಷದಿಂದ 1 ಕೋಟಿ - ಶೇ. 30 ತೆರಿಗೆ,1 ಕೋಟಿ ರೂ. ಮೇಲ್ಪಟ್ಟು - ಶೇ. 30 ತೆರಿಗೆ & ಶೇ.15 ಸರ್​ಚಾರ್ಜ್​, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ: 3 ಲಕ್ಷದವರೆಗೆ - ಯಾವುದೇ ತೆರಿಗೆ ಇಲ್ಲ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ: 5 ಲಕ್ಷದವರೆಗೆ - ಯಾವುದೇ ತೆರಿಗೆ ಇಲ್ಲ

* ಅನ್ಲೈನ್‌ನಲ್ಲಿ ಎಫ್‌ಡಿಐ ಪ್ರಸ್ತಾವನೆ
 
* ಸಾಲ ಮಾಡಿ ಓಡಿ ಹೋದವರ ಆಸ್ತಿ ಸಂಪೂರ್ಣ ಜಪ್ತಿ- ವಿಜಯ್ ಮಲ್ಯಗೆ ಪರೋಕ್ಷ ಟಾಂಗ್ ಕೊಟ್ಟ ಜೇಟ್ಲಿ
 
* ಮನ್ರೇಗಾ ಯೋಜನೆಯಡಿಯಲ್ಲಿ 10ಲಕ್ಷ ಕೆರೆಗಳ ನಿರ್ಮಾಣ

*ತೇಜಸ್ ಎಕ್ಸ್ ಪ್ರೆಸ್ ಪ್ರಾರಂಭ

*2019ರೊಳಗೆ ಎಲ್ಲಾ ರೈಲುಗಳ ಎಲ್ಲಾ ಕೋಚ್‌ಗಳಲ್ಲಿ ಬಯೋ ಟಾಯ್ಲೆಟ್
 
*ಮಹಿಳಾ ಮತ್ತು ಮಕ್ಕಳ ಕಳ್ಯಾಣಕ್ಕೆ 1,84,362ಕೋಟಿ ರೂಪಾಯಿ
 
*2019ರೊಳಗೆ ಜೈವಿಕ ಶೌಚಾಲಯಗಳ ಸ್ಥಾಪನೆ
 
* ದಿವ್ಯಾಂಗ ಸ್ನೇಹಿ ರೈಲ್ವೆ ನಿಲ್ದಾಣಗಳು

*  ಸಾರಿಗೆ ಕ್ಷೇತ್ರಕ್ಕೆ 2.41 ಲಕ್ಷ ಕೋಟಿ ಅನುದಾನ
 
*1 ಕೋಟಿ 50 ಲಕ್ಷ ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಯೋಜನೆ
 
*ಪ್ರತಿ ಹಳ್ಳಿಗಳಲ್ಲಿಯೂ ಶೌಚಾಲಯ ನಿರ್ಮಾಣ
 
* ವಿದ್ಯುತ್ ಯೋಜನೆಗಳಿಗಾಗಿ 4,500ಕೋಟಿ ರೂಪಾಯಿ

*ವಿಮಾನ ನಿಲ್ದಾಣದ ಪ್ರಾಧಿಕಾರದ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ

 

 


 

*ರೈಲ್ವೆ ಸುರಕ್ಷತೆಗೆ 1 ಲಕ್ಷ ಕೋಟಿ
 
*ರೈಲು ನಿಲ್ದಾಣಗಳಲ್ಲಿ ದಿವ್ಯಾಂಗರ ಅನುಕೂಲಕ್ಕೆ ಯೋಜನೆ
 
* ದೇಶದ ಬಡವರಿಗೆ 1 ಕೋಟಿ ಮನೆ
 
*ಸಣ್ಣ ನಗರಗಳಲ್ಲೂ ವಿಮಾನ ನಿಲ್ದಾಣಗಳ ನಿರ್ಮಾಣ
 
*ಕರಾವಳಿ ಹೆದ್ದಾರಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ, 64ಸಾವಿರ ಕೋಟಿ ಅನುದಾನ
 
*ಇ-ಟಿಕೆಟ್ ಮೇಲೆ ಸರ್ವೀಸ್ ಚಾರ್ಜ್ ಇಲ್ಲ

* * ಶೇ.100ರಷ್ಟು ವಿದ್ಯುದ್ದೀಕರಣ ಗುರಿ
 
* ನರೇಗಾ ಯೋಜನೆಗೆ 48 ಸಾವಿರ ಕೋಟಿ ರೂ. ಏರಿಕೆ
 
 * ಗ್ರಾಮೀಣ ಪ್ರದೇಶದಲ್ಲಿ 10 ಲಕ್ಷ ಕೆರೆಗಳ ನಿರ್ಮಾಣ
 
* ನೂರು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ

 
* 2020ರೊಳಗೆ ಮಾನವ ರಹಿತ ರೇಲ್ವೆ ಕ್ರಾಸಿಂಗ್
 
* 4 ಪ್ರಮುಖ ಉದ್ದೇಶಗಳೊಂದಿಗೆ ರೇಲ್ವೆ ಕ್ಷೇತ್ರ ಅಭಿವೃದ್ಧಿ
 
* ಹಿರಿಯ ನಾಗರಿಕರಿಗೆ ಆರೋಗ್ಯ ಕಾರ್ಡ್ ವಿತರಣೆ
 
*ಈ ಬಾರಿ ಹೆಚ್ಚುವರಿ 5,000 ಮೆಡಿಕಲ್ ಸೀಟ್
 
* ಎಲ್ಲ ಪ್ರವೇಶ ಪರೀಕ್ಷೆಗಳಿಗೂ ಒಂದೇ ಒಂದು ಪ್ರಾಧಿಕಾರ

*ಹಳ್ಳಿಗಳಿಗೆ ಶುದ್ಧ ಕುಡಿುಯವ ನೀರು ಪೂರೈಕೆಗೆ ಯೋಜನೆ
 
*ಶಾಲೆಗಳಲ್ಲಿ ಕಲಿಕೆಗೆ ಹೊಸ ಸುಧಾರಿತ ವ್ಯವಸ್ಥೆ, ರಾಷ್ಟ್ರೀಯ ಪರೀಕ್ಷೆಗಳಿಗಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಜಾರಿ, ಹೆಚ್ಚು ಕಾಲೇಜುಗಳಿಗೆ ಸ್ವಾಯತ್ತತೆ
 
*ಲೆದರ್ ಹಾಗೂ ಪಾದರಕ್ಷೆ ಕ್ಷೇತ್ರಗಳಿಗೆ ಹೊಸ ಯೋಜನೆ
 
ಮಹಿಳಾ ಕಲ್ಯಾಣಕ್ಕಾಗಿ 1.48ಲಕ್ಷ ಕೋಟಿ ರೂಪಾಯಿ
 
*ಕೌಶಲ್ಯಾಭಿವೃದ್ಧಿಗೆ 100 ಕೇಂದ್ರಗಳ ಸ್ಥಾಪನೆ
 
*ಗರ್ಭಿಣಿಯರಿಗೆ 6,000 ಸಹಾಯ ಧನ
 
*2025ರೊಳಗೆ ಟಿಬಿ ಮುಕ್ತ ಭಾರತ
 
*Textile ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆಗಳು
 
*ಜಾರ್ಖಂಡ್ ಮತ್ತು ಗುಜರಾತ್‌ನಲ್ಲಿ 2 ಏಮ್ಸ್ ಕೇಂದ್ರಗಳ ಆರಂಭ
 
*2019ರೊಳಗೆ ಹಳ್ಳಿಗಳಲ್ಲಿ ಬಡತನ ಮುಕ್ತಗೊಳಿಸಲು ಕ್ರಮ
 
*2019ರೊಳಗೆ ಹಳ್ಳಿಗಳಲ್ಲಿ ಬಡತನ ಮುಕ್ತಗೊಳಿಸಲು ಕ್ರಮ

*1 ಕೋಟಿ ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲೆ ತರುವ ಉದ್ದೇಶ ಕೇಂದ್ರಕ್ಕಿದ್ದು ಇಂತಹ ಕುಟುಂಬಗಳಿಗಾಗಿ ಅಂತ್ಯೋದಯ ಯೋಜನೆ 

* ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೇಂದ್ರ ನೆರವು ನೀಡಲಿದೆ. ಭಾರತದ ಮುಂದಿನ ಗುರಿ ಟೆಕ್ ಇಂಡಿಯಾ ಯೋಜನೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಬದ್ಧವಾಗಿದೆ. ಜಿಎಸ್‌ಟಿ ಜಾರಿ ಬಳಿಕ ದೇಶದ ಅಭಿವೃದ್ಧಿ ವೇಗ ಪಡೆಯಲಿದೆ.  ಬೆಳೆ ವಿಮೆ ಯೋಜನೆಗೆ 9000 ಕೋಟಿ - ಜೇಟ್ಲಿ
 
*ನಮ್ಮ ಅವಧಿಯಲ್ಲಿ ಎರಡಂಕಿಯ ಹಣದುಬ್ಬರ ನಿಯಂತ್ರಣವಾಗಿದೆ. ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ಅಮಾನ್ಯೀಕರಣ ಸಹ ಪೂರಕ, ಈ ನಿಟ್ಟಿನಲ್ಲಿ ಸಹಕರಿಸಿದ ಎಲ್ಲ ರಾಜ್ಯಗಳಿಗೆ ಧನ್ಯವಾದಗಳು- ಜೇಟ್ಲಿ

*ಸಾರ್ವಜನಿಕ ಹಣವನ್ನು ಸದುಪಯೋಗ ಪಡಿಸಿಕೊಳ್ಳಲು ಕ್ರಮ- ಜೇಟ್ಲಿ ಹೇಳಿಕೆ

* ಪ್ರತಿಪಕ್ಷಗಳ ಗದ್ದಲದ ನಡುವೆ  ಬಜೆಟ್ ಓದುತ್ತಿರುವ ಜೇಟ್ಲಿ

* ಇಂದು ಬಜೆಟ್ ಮಂಡನೆಗೆ ಅವಕಾಶ, ಇ. ಅಹ್ಮದ್ ಸಾವಿನ ಗೌರವಾರ್ಥ ನಾಳೆ ಕಲಾಪ ಇಲ್ಲ

*ಬಜೆಟ್ ಮಂಡನೆಗೆ ಮುನ್ನ ಇ. ಅಹ್ಮದ್ ಸಾವಿಗೆ ಸಂತಾಪ, ಮೌನಾಚರಣೆ

*ಲೋಕಸಭಾ ಕಲಾಪ ಆರಂಭ

* ಬಜೆಟ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

* ಬಜೆಟ್ ಮಂಡನೆ ಮುಂದೂಡಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ ಸುಮಿತ್ರಾ ಮಹಾಜನ್, ಅರುಣ್ ಜೇಟ್ಲಿ

* ಬಜೆಟ್ ಮಂಡನೆ ಮುಂದೂಡುವಂತೆ ಶಿವಸೇನೆ, ಕಾಂಗ್ರೆಸ್ ಒತ್ತಾಯ

* ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಇ.ಅಹ್ಮದ್ ನಿಧನದ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ನಾಳೆಗೆ ಮುಂದೂಡಿಕೆ ಸಾಧ್ಯತೆ

ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ನೋಟ್ ನಿಷೇಧದ ಬಳಿಕ ಮೊದಲ ಬಾರಿಗೆ ಮಂಡನೆಯಾಗುತ್ತಿರುವ ಬಜೆಟ್ ಬಗ್ಗೆ ದೇಶಾದ್ಯಂತ ಕುತೂಹಲ ಮೂಡಿದೆ. ರೇಲ್ವೆ ಬಜೆಟ್‌ನ್ನು ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸಲಾಗಿದ್ದು ಇದೇ ಮೊದಲ ಬಾರಿಗೆ ಬಜೆಟ್ ಒಂದು ತಿಂಗಳ ಮೊದಲು ಮಂಡನೆಯಾಗುತ್ತಿರುವುದು ವಿಶೇಷ.

ವೆಬ್ದುನಿಯಾವನ್ನು ಓದಿ