ಪ್ರಧಾನಿ ಮೋದಿ ಸುನಾಮಿಗೆ ಕೊಚ್ಚಿ ಹೋದ ವಿಪಕ್ಷಗಳು: ಉ.ಪ್ರದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ

ಶನಿವಾರ, 11 ಮಾರ್ಚ್ 2017 (15:13 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸುನಾಮಿಯಲ್ಲಿ ವಿಪಕ್ಷಗಳು ಕೊಚ್ಚಿಹೋಗಿವೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹಮತದತ್ತ ಸಾಗುತ್ತಿರುವ ಬಿಜೆಪಿ, ಸರಕಾರ ರಚಿಸಲು ಸಜ್ಜುಗೊಳ್ಳುತ್ತಿದೆ. 
ಸುಮಾರು 15 ವರ್ಷಗಳ ನಂತರ ರಾಜ್ಯದಲ್ಲಿ ಸರಕಾರ ರಚಿಸುವ ಅವಕಾಶ ಪಡೆದ ಬಿಜೆಪಿ, ವಿಪಕ್ಷಗಳನ್ನು ಚುನಾವಣೆಯಲ್ಲಿ ಧೂಳಿಪಟ ಮಾಡಿದೆ.
 
ರಾಜ್ಯದ 403 ಕ್ಷೇತ್ರಗಳಲ್ಲಿ 305 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ರಾಹುಲ್- ಅಖಿಲೇಶ್ ನೇತೃತ್ವದ ಎಸ್‌ಪಿೃಕಾಂಗ್ರೆಸ್ ಮೈತ್ರಿಕೂಟ 69 ಸ್ಥಾನಗಳಿಸಿದ್ದರೆ, ಬಿಜೆಪಿ ಕೇವಲ 19 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಹೀನಾಯ ಸೋಲನುಭವಿಸಿದೆ.  
 
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತವರು ಕ್ಷೇತ್ರವಾದ ರಾಯ್‌ಬರೇಲಿ ಮತ್ತು ಅಮೇಥಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.
 
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸುನಾಮಿಯನ್ನು ತಡೆಯಲೇಬೇಕು ಎನ್ನುವ ಉದ್ದೇಶದಿಂದ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆ ಕಣಕ್ಕೆ ಇಳಿದಿದ್ದವು. ಆದರೆ, ಮತದಾರ ಪ್ರಭು ಬಿಜೆಪಿಗೆ ಮಣೆಹಾಕಿದ್ದಾನೆ.
 
ಅನಿವಾರ್ಯವಾದಲ್ಲಿ ಕೋಮುವಾದಿಗಳನ್ನು ತಡೆಯಲು ಬಿಎಸ್‌ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದ ಎಂದು ಅಖಿಲೇಶ್ ಯಾದವ್ ಘೋಷಿಸಿದ್ದರು.ಆದರೆ, ಎರಡು ಪಕ್ಷಗಳನ್ನು ಸೇರಿಸಿದರು ಸರಕಾರ ರಚಿಸಲು ಸಾಧ್ಯವಿಲ್ಲ.
 
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಘಟಾನುಗಟಿಗಳು ಸೋಲು ಕಂಡಿದ್ದಾರೆ. 
 
ಉತ್ತರಾಖಂಡ ಸಿಎಂ ಹರೀಶ್ ರಾವತ್, ಗೋವಾ ಸಿಎಂ ಲಕ್ಷ್ಮಿಕಾಂತ್ ಪರ್ಸೇಕರ್ ಮತ್ತು ಉಕ್ಕಿನ ಮಹಿಳೆ ಎನ್ನುವ ಖ್ಯಾತಿಗೊಳಗಾಗಿದ್ದ ಇರೋಮ್ ಶರ್ಮಿಲಾ ಸೋಲನುಭವಿಸಿದ ಪ್ರಮುಖರಾಗಿದ್ದಾರೆ.
 
ಉತ್ತರಪ್ರದೇಶ, ಉತ್ತರಖಂಡ್, ಗೋವಾ, ಮಣಿಪುರ ಹಾಗೂ ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದು, ಉತ್ತರಪ್ರದೇಶ ಮತ್ತು ಉತ್ತರಖಂಡ್ ನಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. ಇನ್ನು ಪಂಜಾಬ್ ಮತ್ತು ಮಣಿಪುರ ಗೋವಾದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 
 
ಉತ್ತರಪ್ರದೇಶದಲ್ಲಿ ಸಿಎಂ ಯಾರಾಗಬಹುದು?
 
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಆದಿತ್ಯನಾಥ್, ಉಮಾಭಾರತಿ, ಕೇಶವ್ ಮೌರ್ಯ, ಮಹೇಶ್ ಶರ್ಮಾ ಮತ್ತು ಕಲ್ರಾಜ್ ಮಿಶ್ರಾ ಹೇಸರುಗಳು ಸಿಎಂ ರೇಸ್‌ನಲ್ಲಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ