ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಗುಪ್ತಾಂಗ ಸುಟ್ಟ ಕಾಮುಕರು

ಭಾನುವಾರ, 24 ಜುಲೈ 2016 (16:38 IST)
ಡಾನ್ಸ್ ಗ್ರೂಪ್‌ಗೆ ಸೇರ್ಪಡೆಗೊಳ್ಳಲು ನಿರಾಕರಿಸಿದ 26 ವರ್ಷದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಲ್ಲದೇ ಕಿರುಕುಳ ನೀಡಿದ ಘಟನೆ ಖುಷಿನಗರದಲ್ಲಿ ವರದಿಯಾಗಿದೆ. 
 
ಆರೋಪಿಗಳ ಕಪಿಮುಷ್ಠಿಯಿಂದ ಪಾರಾದ ಯುವತಿ ತನ್ನ ಗೆಳತಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದು ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಯುವತಿ ನೀಡಿದ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
 
ಗ್ಯಾಂಗ್‌ರೇಪ್‌ಗೊಳಗಾದ ಯುವತಿಯ ಹೇಳಿಕೆಯನ್ನು ಪಡೆದ ನಂತರ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
 
ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಪರಾರಿಯಾಗಿರುವ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಬ್ರಿಜೇಶ್ ಕುಮಾರ್ ತಿಳಿಸಿದ್ದಾರೆ.
 
ವಾರಣಾಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ತಾಯಿಯನ್ನು ಭೇಟಿ ಮಾಡಲು ವಾರಣಾಸಿಗೆ ಬಂದಿದ್ದಳು. ತಾಯಿಯ ಗೆಳತಿಯೊಬ್ಬಳು ವಿವಾಹದ ಕಾರ್ಯಕ್ರಮವಿರುವುದರಿಂದ ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾಳೆ.
 
ವಿವಾಹ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುವಂತೆ ತಾಯಿಯ ಗೆಳತಿ ಯುವತಿಗೆ ಒತ್ತಾಯಿಸಿದ್ದಾಳೆ. ಆಕೆ ನಿರಾಕರಿಸಿದಾಗ ಐವರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ಗುಪ್ತಾಂಗವನ್ನು ಸೀಗರೇಟಿನಿಂದ ಸುಟ್ಟಿದ್ದಾರೆ.
 
ಮಾರನೇ ದಿನ ಆರೋಪಿಗಳು ಸೇರಿದಂತೆ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಕಟಟ್ಡದ ಮೇಲಿನಿಂದ ಹಾರಿ ಪಾರಾಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ