ಆಗಸ್ಟಾ ಕಂಪನಿ ನೆರವಿಗೆ ಯುಪಿಎ ಸರ್ವಪ್ರಯತ್ನ : ಪರಿಕ್ಕರ್

ಶುಕ್ರವಾರ, 6 ಮೇ 2016 (18:00 IST)
ಹಿಂದಿನ ಯುಪಿಎ ಸರ್ಕಾರ ವಿವಿಐಪಿ ಹೆಲಿಕಾಪ್ಟರ್ ಗುತ್ತಿಗೆಯನ್ನು ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಗೆ ನೀಡಲು ಸರ್ವ ಪ್ರಯತ್ನಮಾಡಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದ್ದು, ಈ ಒಪ್ಪಂದದಲ್ಲಿ ಲಂಚದ ಫಲಾನುಭವಿಗಳ ಜಾಡನ್ನು ನಾವು ಪತ್ತೆಹಚ್ಚುವುದಾಗಿ ತಿಳಿಸಿದೆ. 
 
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಲೋಕಸಭೆಯಲ್ಲಿ ಮಾತನಾಡುತ್ತಾ, ಮಾಜಿ ಏರ್ ಚೀಫ್ ತ್ಯಾಗಿ ಮತ್ತು ಗೌತಮ್ ಖೈತಾನ್ ಇಬ್ಬರೂ ಆರೋಪಿಗಳಾಗಿದ್ದು, ಹರಿಯುವ ಭ್ರಷ್ಟಾಚಾರದ ಗಂಗೆಯಲ್ಲಿ  ಕೇವಲ ಕೈತೊಳೆದುಕೊಂಡಿದ್ದಾರೆ. ಆದರೆ ನದಿ ಎಲ್ಲಿ ಹರಿದುಹೋಗುತ್ತಿದೆ ಎಂದು ಪತ್ತೆಹಚ್ಚಬೇಕಿದೆ ಎಂದು ಪರಿಕ್ಕರ್ ನುಡಿದರು. 
ಚಾಪರ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಗಮನ ಸೆಳೆಯುವ ನಿರ್ಣಯ ಕುರಿತು ಮಾತನಾಡುತ್ತಿದ್ದ ಅವರು ಕಾಂಗ್ರೆಸ್‌‍ನತ್ತ ವಾಗ್ಬಾಣ ತೂರಿ, ಈ ಗಂಗಾ ಎಲ್ಲಿ ಹರಿಯುತ್ತದೆಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದರು.
 
 ಆಗಸ್ಟಾ ಲ್ಯಾಂಡ್ ಕಂಪನಿ ಗುತ್ತಿಗೆ ಪಡೆಯಲು ಕಾಂಗ್ರೆಸ್ ಸರ್ವಪ್ರಯತ್ನ ಮಾಡಿದ್ದು, ಭ್ರಷ್ಟಾಚಾರ ಬಹಿರಂಗವಾದ ಮೇಲೆ ಕಂಪನಿ ವಿರುದ್ಧ ಕಾಂಗ್ರೆಸ್ ಕ್ರಮವು ಪೂರ್ವ ನಿಯಾಮಕವಲ್ಲ, ಆದರೆ ಸಂದರ್ಭದ ಒತ್ತಡವಾಗಿತ್ತು ಎಂದು ಟೀಕಿಸಿದರು.  ಸರ್ಕಾರವು 3600 ಕೋಟಿ ವಿವಿಐಪಿ ಹೆಲಿಕಾಪ್ಟರ್ ಒಪ್ಪಂದದಲ್ಲಿ ಲಂಚದ ಮುಖ್ಯ ಫಲಾನುಭವಿಗಳನ್ನು ಪತ್ತೆಹಚ್ಚುವುದಾಗಿ ಪರಿಕ್ಕರ್ ಪ್ರತಿಪಾದಿಸಿದರು. 

ವೆಬ್ದುನಿಯಾವನ್ನು ಓದಿ