ಉಸೇನ್ ಬೋಲ್ಟ್ 9 ಚಿನ್ನ ಗೆಲ್ಲಲು ಗೋಮಾಂಸ ಸೇವನೆ ಕಾರಣ: ಬಿಜೆಪಿ ಸಂಸದ ಉದಿತ್ ರಾಜ್

ಸೋಮವಾರ, 29 ಆಗಸ್ಟ್ 2016 (12:23 IST)
ಗೋಮಾಂಸವನ್ನು ಅಧಿಕವಾಗಿ ಸೇವಿಸುವುದರಿಂದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದಕ್ಕೆ ಸಾಧ್ಯವೇ, ಹೌದು, ಸಾಧ್ಯವೆಂದು ಬಿಜೆಪಿ ಸಂಸದ ಉದಿತ್ ರಾಜ್ ತಮ್ಮ ಅಭಿಪ್ರಾಯವನ್ನು ಬಿಚ್ಟಿಟ್ಟಿದ್ದಾರೆ.  ಒಲಿಂಪಿಕ್ಸ್‌ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡ ಜಮೈಕಾದ ಲೆಜೆಂಡ್ ಉಸೇನ್ ಬೋಲ್ಟ್ ಸಾಕಷ್ಟು ಗೋಮಾಂಸ ಸೇವಿಸುವುದು ಅವರ ಅದ್ಭುತ ಯಶಸ್ಸಿನ ಹಿಂದಿನ ಗುಟ್ಟು ಎಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದರು.  ಸಾಮಾಜಿಕ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಉದಿತ್ ತಮ್ಮ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ. 
 
ಜಗತ್ತಿನ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ತುಂಬಾ ಬಡವರಾಗಿದ್ದು, ಅವರ ಕೋಚ್ ಗೋಮಾಂಸ ಸೇವಿಸುವಂತೆ ಬೋಲ್ಟ್‌ಗೆ ಸಲಹೆ ಮಾಡಿದ್ದರು. ಅವರ ಸಲಹೆಯನ್ನು ಬೋಲ್ಟ್ ಅನುಷ್ಠಾನಕ್ಕೆ ತಂದ ಬಳಿಕ ಅತೀ ದೊಡ್ಡ ಕ್ರೀಡಾವೈಭವ ಒಲಿಂಪಿಕ್ಸ್‌ನಲ್ಲಿ ಅವರು ಪದಕಗಳನ್ನು ಗೆಲ್ಲಲಾರಂಭಿಸಿದರು ಎಂದು ಡೆಲ್ಲಿ ಸಂಸದರು ವ್ಯಾಖ್ಯಾನಿಸಿದ್ದಾರೆ.
 
ಜಮೈಕಾದ ಸ್ಪ್ರಿಂಟರ್ ರಿಯೊ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಗಳಿಸುವ ಮೂಲಕ ಮೂರು ಬಾರಿ ಈ ಸಾಧನೆ ಮಾಡಿದರು. ಮೊದಲಿಗೆ ಅವರು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ