ಉತ್ತರ ಪ್ರದೇಶದಲ್ಲಿಂದು 5 ನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು 18,822 ಮತಗಟ್ಟೆಗಳನ್ನು ತೆರೆಯಲಾಗಿದೆ.ಇದರಲ್ಲಿ 2,351 ಮತಗಟ್ಟೆಗಳಿಗೆ ವಿಶೇಷ ಭದ್ರತೆಯನ್ನೊದಗಿಸಲಾಗಿದೆ.
ಮತಗಟ್ಟೆಗಳಿಗೆ ವ್ಯಾಪಕ ಭದ್ರತೆ ಏರ್ಪಡಿಸಲಾಗಿದ್ದು, ಅಕ್ರಮಗಳನ್ನು ತಡೆಯಲು 905 ಡಿಜಿಟಲ್ ಕ್ಯಾಮರಾ, 978 ವೀಡಿಯೋ ಕ್ಯಾಮರಾ ಅಳವಡಿಸಲಾಗಿದೆ. 1792 ಕೇಂದ್ರಗಳಲ್ಲಿ ವೆಬ್ ವೋಟಿಂಗ್ ಜಾರಿಯಲ್ಲಿರಲಿದೆ.
ಅಮೆಥಿ, ಸುಲ್ತಾನ್ಪುರ, ಬಲರಾಮ್ಪುರ, ಗೊಂಡಾ, ಫೈಜಾಬಾದ್, ಅಂಬೇಡ್ಕರ್ ನಗರ, ಬಹೈರಿಚ್, ಶ್ರವಸ್ತಿ, ಸಿದ್ದಾರ್ಥನಗರ, ಬಸ್ತಿ, ಸಂತ ಕಬೀರನಗರ್ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದ್ದು ಸಚಿವ ವಿನೋದ್ ಕುಮಾರ್ ಅಲಿಯಾಸ್ ಪಂಡಿತ್ ಸಿಂಗ್ (ಗೊಂಡಾ), ತೇಜ್ ನರೈನ್ ಸಿಂಗ್ ಪಾಂಡೆ ಅಲಿಯಾಸ್ ಪವನ್ ಪಾಂಡೆ (ಅಯೋಧ್ಯಾ) ಮತ್ತು ಬಿಎಸ್ಪಿ ರಾಜ್ಯಾಧ್ಯಕ್ಷ ರಾಮ್ ಅಚಲ್ ರಾಜ್ಭರ್ (ಅಕ್ರಬರ್ಪುರ್) ಪ್ರಮುಖ ಸ್ಪರ್ಧಿಗಳಾಗಿದ್ದಾರೆ.