ತ್ರಿವಳಿ ತಲಾಖ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶದ ಸಚಿವ

ಶನಿವಾರ, 29 ಏಪ್ರಿಲ್ 2017 (18:50 IST)
ತ್ರಿವಳಿ ತಲಾಖ್ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತ್ರಿವಳಿ ತಲಾಖ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮ್ಮ ಕಾಮದ ಹಸಿವು ತೀರಿಸಿಕೊಳ್ಳುವುದಕ್ಕಾಗಿ ಪತ್ನಿಯರನ್ನ ಬದಲಿಸಲು ಮುಸ್ಲಿಮರು ತ್ರಿವಳಿ ತಲಾಖ್ ಬಳಸುತ್ತಿದ್ದಾರೆ ಎಂದು ಸಚಿವ ಸ್ವಾಮಿ ಹೇಳಿದ್ದಾರೆ.
 

ಇದೇವೇಳೆ, ತ್ರಿವಳಿ ತಲಾಖ್`ಗೆ ಯಾವುದೇ ಆಧಾರವಿಲ್ಲ ಎಂದಿರುವ ಸಚಿವ ಮೌರ್ಯ,   ವಿನಾಕಾರಣ ತಲಾಖ್ ನೀಡಲ್ಪಟ್ಟಿರುವ ಮಹಿಳೆಯರ ಪರವಾಗಿ ಬಿಜೆಪಿ ಇದೆ ಎಂದಿದ್ಧಾರೆ.

`ತಲಾಖ್`ಗೆ ಯಾವುದೇ ಆಧಾರವಿಲ್ಲ. ಕೇವಲ ತಮ್ಮ ಕಾಮಕ್ಕಾಗಿ ಬಳಸಿಕೊಂಡು ಪತ್ನಿ ಮತ್ತು ಮಕ್ಕಳನ್ನ ಬೀದಿಗೆ ಬಿಡುತ್ತಿದ್ದಾರೆ. ಅಂತಹ ಸಂತ್ರಸ್ತ ಮಹಿಳೆಯರ ಪರ ಬಿಜೆಪಿ ಇದೆ. ಅವರು ಗೌರವದಿಂದ ಬಾಳಲು ನೆರವು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಸಚಿವ ಮೌರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಇಸ್ಲಾಂ ವೈಯಕ್ತಿಕ ಕಾನೂನು ಮಂಡಳಿಯ ಹಿರಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್, ಬೇಷರತ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ