ಬರೀ 20 ದಿನದಲ್ಲಿ 8 ಸಾವಿರ ಶೌಚಾಲಯ ನಿರ್ಮಾಣ

ಬುಧವಾರ, 26 ಅಕ್ಟೋಬರ್ 2016 (19:21 IST)
ಕೇವಲ 20 ದಿನದಲ್ಲಿ 8000 ಸಾವಿರಕ್ಕೂ ಅಧಿಕ ಶೌಚಾಲಯ ನಿರ್ಮಾಣ ಮಾಡಿ ಲಿಮ್ಕಾ ದಾಖಲೆ ಮಾಡಿದೆ ಇಲ್ಲಿನ ಉಧಮಸಿಂಗ್ ನಗರ ಜಿಲ್ಲೆ.  ಹೌದು ಆಶ್ಚರ್ಯವಾದ್ರೂ ಇದು ಸತ್ಯ. 
ಸ್ವಚ್ಛ ಭಾರತ ಅಭಿಯಾನದಡಿ ಇಲ್ಲಿನ ಉಧಮಸಿಂಗ್ ನಗರ ಜಿಲ್ಲೆಯ 352 ಕ್ಕೂ ಅಧಿಕ ಗ್ರಾಮ ಪಂಚಾಯತ್ನಲ್ಲಿ ಕೇವಲ 20 ದಿನದಲ್ಲಿ 8000 ಸಾವಿರ ಶೌಚಾಲಯ ನಿರ್ಮಾಣ ಮಾಡಲಾಗಿದೆ. 
 
ಜನವರಿ 25 2016 ರಂದು ಶುರುವಾಗಿದ್ದ ಸ್ವಜಲ ಪ್ರಯೋಜನಾ ಹಾಗೂ ಬಯಲು  ಶೌಚ ಮುಕ್ತ ಗ್ರಾಮಕ್ಕೆ ಮುಂದಾಗಿದ್ದ ಜಿಲ್ಲಾಡಳಿತ ಫೆಬ್ರವರಿ 15 2016 ರಷ್ಟೊತ್ತಿಗೆ ಅಂದರೆ 20 ದಿನದಲ್ಲಿ ಬರೋಬ್ಬರಿ 8000 ಶೌಚಾಲಯ ನಿರ್ಮಿಸಿದ್ದು, ಅವಾರ್ಡ್ ಕೂಡಾ ಪಡೆದುಕೊಂಡಿದೆ. 
 
ಸ್ವಚ್ಛ ಭಾರತ ಅಭಿಯಾನದಡಿ ಉಧಮಸಿಂಗ್  ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ನೀಡಿದ್ದ 76,016 ಗುರಿ ತಲುಪಿದೆ. ಇದೇ ಯೋಜನೆಯಡಿ ಇಲ್ಲಿನ ರುದ್ರಾಪುರ, ಕಾಶಿಪುರ, ಗದರ್ಪುರ ಗ್ರಾಮವೂ ಬಯಲು ಮುಕ್ತ ಶೌಚಕ್ಕೆ ಮುಂದಾಗಿದ್ದು, ಶೀಘ್ರ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಈ ಅಭಿವೃದ್ಧಿಯ ವರದಿಯನ್ನು ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಚಂದ್ರೇಶ ಯಾದವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ