ಉತ್ತರಾಖಂಡ: ಭೂಕುಸಿತದಲ್ಲಿ 11 ಜನರ ಸಾವು, ಹಲವರ ಸ್ಥಿತಿ ಗಂಬೀರ

ಸೋಮವಾರ, 23 ಮೇ 2016 (20:50 IST)
ಜಿಲ್ಲೆಯ ಚಕ್ರಕಾ ಪಟ್ಟಣದಲ್ಲಿ ಸಂಬವಿಸಿದ ಭೂಕುಸಿತದಲ್ಲಿ 11 ಮಂದಿ ಸೇರಿದಂತೆ ಎರಡು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.
 
ಡೆಹರಾಡೂನ್ ಜಿಲ್ಲೆಯ ಚಕ್ರತಾ ಪ್ರದೇಶದಲ್ಲಿ ರವಿವಾರದಂದು ರಾತ್ರಿ ಭೂ ಕುಸಿತ ಸಂಭವಿಸಿದಾಗ ಕಾರ್ಮಿಕರ ಮನೆಗಳು ನೆಲಸಮವಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 10 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಭೂ ಕುಸಿತದಲ್ಲಿ ಸಿಲುಕಿದ ಜನರ ರಕ್ಷಣೆ ಕಾರ್ಯಾಚರಣೆಗಾಗಿ ಜೆಸಿಬಿ ಬಳಸಲಾಯಿತು. ಪರಿಹಾರ ಕಾರ್ಯಗಳು ಮುಂದುವರಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಜಿಲ್ಲಾಧಿಕಾರಿ ರವಿನಾಥ್ ರಮಣ್ ಮಾತನಾಡಿ, ಭೂ ಕುಸಿತದಲ್ಲಿ ಸಿಲುಕಿದ್ದ ಐವರಿಗೆ ಪ್ರಾಥಮಿಕ ಚಿಕಿತ್ಸೆ ನೀಡ ಜೀವ ಕಾಪಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಕಾರ್ಮಿಕರನ್ನು ಡೂನ್ ಮೆಡಿಕಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಭಾರಿ ಗಾಳಿ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಮರವೊಂದು ಒಬ್ಬ ವ್ಯಕ್ತಿಯ ಮೇಲೆ ಬಿದ್ದಿದ್ದರಿಂದ ಅತನು ಸಾವನ್ನಪ್ಪಿದ್ದಾನೆ ಎಂದು ಜಿಲ್ಲಾಧಿಕಾರಿ ರಮಣ್ ಮಾಹಿತಿ ನೀಡಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ