ಕೇಂದ್ರ ಸಚಿವೆ ಮೇನಕಾ ಗಾಂಧಿ ಮತ್ತು ಸಂಜಯ್ ಗಾಂಧಿ ಪುತ್ರರಾದ ವರುಣ್ ಗಾಂಧಿಯನ್ನು ಯುವಕರ ಫೈರ್‌ಬ್ರ್ಯಾಂಡ್ ಎಂದು ಗುರುತಿಸಲಾಗಿತ್ತು. ಆದರೆ, ಅಮಿತ್ ಶಾ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ವರುಣ್ ಗಾಂಧಿಯನ್ನು ಕಡೆಗೆಣಿಸಲಾಗಿತ್ತು.
ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಮುರಳಿ ಮನೋಹರ್ ಜೋಷಿ,ರಾಜನಾಥ್ ಸಿಂಗ್, ಉಮಾ ಭಾರತಿ, ಅರುಣ್ ಜೇಟ್ಲಿ, ಎಂ.ವೆಂಕಯ್ಯ ನಾಯ್ಡು, ಸ್ಮೃತಿ ಇರಾನಿ, ಪಿಯೂಷ್ ಗೋಯಲ್, ವಿ.ಕೆ.ಸಿಂಗ್, ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ನಿತಿನ್ ಗಡ್ಕರಿ ಸ್ಥಾನ ಪಡೆದಿದ್ದಾರೆ.
ಹಿರಿಯ ನಾಯಕರಾದ ಓಂ ಮಾಥುರ್, ವಿನಯ್ ಕಟಿಯಾರ್, ಸ್ವಾಮಿ ಪ್ರಸಾದ್ ಮೌರ್ಯ ಕೂಡಾ ಮೂರನೇ ಮತ್ತು ನಾಲ್ಕನೇ ಹಂತದಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಲಿವುಡ್‌ನ ಖ್ಯಾತ ಹಿರಿಯ ನಟಿ ಹೇಮಾ ಮಾಲಿನಿ, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಕಾಮಿಡಿ ನಟ ರಾಜು ಶ್ರೀವಾಸ್ತವ್, ರಾಜಸ್ಥಾನ ಸಿಎಂ ವಸುಂಧರಾ ರಾಜೇ ಸಿಂಧಿಯಾ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಕೂಡಾ ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ