ರಾಹುಲ್ ಪ್ರಜಾಪ್ರಭುತ್ವದ ವ್ಯಾಖ್ಯಾನ ಭೂತದ ಬಾಯಲ್ಲಿ ಭಗವದ್ಗೀತೆಯಂತೆ

ಮಂಗಳವಾರ, 8 ನವೆಂಬರ್ 2016 (16:09 IST)
ಎನ್‌ಡಿ ಟಿವಿ ಬ್ಯಾನ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ಕಿಡಿಕಾರುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಕಟುವಾಗಿ ಹರಿಹಾಯಿದ್ದಾರೆ. 
 
ರಾಹುಲ್ ಬಾಯಲ್ಲಿ ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳ ವ್ಯಾಖ್ಯಾನ ಕೇಳುತ್ತಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ. 
 
ರಾಹುಲ್ ಮಾತನಾಡುವ ಪ್ರತಿ ಶಬ್ಧ ಅವರಿಗೆ ತಕ್ಕುದಾಗಿದೆ. ಅವರೇನು ಮಾಡಿದ್ದರು ಎಂಬುದನ್ನು ದೇಶಕ್ಕೆ ನೆನಪು ಮಾಡಿಕೊಡುತ್ತದೆ. ಆದರೆ ಅದು ಅವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ. ರಾಹುಲ್ ಮಾತು ಜನರಿಗೆ 1975ರಲ್ಲಿ ಕಾಂಗ್ರೆಸ್ ಸರ್ಕಾರ ಹೇರಿದ್ದ ತುರ್ತುಪರಿಸ್ಥಿತಿ ದಿನಗಳನ್ನು ನೆನಪಿಗೆ ತರುತ್ತದೆ. ಕಾಂಗ್ರೆಸ್ ಲೋಕತಂತ್ರ ಮತ್ತು ಮೂಲಭೂತ ಹಕ್ಕುಗಳ ಕುರಿತು ಮಾತನ್ನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದಿದ್ದಾರೆ. 
 
ಖಾಸಗಿ ಸುದ್ದಿವಾಹಿನಿ ಮೇಲೆ ಒಂದು ದಿನದ ನಿಷೇಧ ಹೇರಿದ್ದಕ್ಕೆ ರಾಹುಲ್ ಪ್ರಜಾಪ್ರಭುತ್ವದ ಅವನತಿ ಎನ್ನುತ್ತಾರೆ. ಮೂಲಭೂತ ಹಕ್ಕಿನ ಮಾತನ್ನಾಡುತ್ತಾರೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ 21 ವಾಹಿನಿಗಳ ಬ್ಯಾನ್ ಹೇರಿದ್ದು ಅವರಿಗೆ ಮರೆತು ಹೋಗಿದೆಯೇ? ಎಂದು ನಾಯ್ಡು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ