ವೀಡಿಯೋ ಲೀಕ್ : ಸ್ನಾನದ ವೀಡಿಯೋ ರೆಕಾರ್ಡ್ ಮಾಡಿದ್ದವ ಅರೆಸ್ಟ್

ಶನಿವಾರ, 1 ಅಕ್ಟೋಬರ್ 2022 (12:08 IST)
ಜೈಪುರ : ಬಾಲಕಿಯರ ಹಾಸ್ಟೆಲ್ನಲ್ಲಿ ತಂಗಿದ್ದ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿದ್ದಾಗ ಹಾಸ್ಟೆಲ್ ಸಿಬ್ಬಂದಿ ವೀಡಿಯೋ ಮಾಡಿದ್ದಾನೆ ಎಂದು ಆರೋಪಿಸಿದ ಹಿನ್ನೆಲೆ ಕಾನ್ಪುರ ಪೊಲೀಸರು ಕಸ ಗುಡಿಸುವವನನ್ನು ಬಂಧಿಸಿದ್ದಾರೆ.

ಸಾಯಿ ನಿವಾಸ್ ಬಾಲಕಿಯರ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿನಿಯೊಬ್ಬರು ಕಸ ಗುಡಿಸುವ ಸಿಬ್ಬಂದಿ ತಾನು ಸ್ನಾನ ಮಾಡುತ್ತಿರುವಾಗ ವೀಡಿಯೋ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಮೊದಲಿಗೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಇತರ ಹುಡುಗಿಯರು ತಾವು ಸ್ನಾನ ಮಾಡುತ್ತಿದ್ದ ವೀಡಿಯೋವನ್ನು ಆರೋಪಿ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಿದ ನಂತರ ಈ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ