Video: ಟ್ರೈನ್ ನ ಅಪ್ಪರ್ ಬರ್ತ್ ನಲ್ಲಿ ಯುವ ಜೋಡಿಯ ಖುಲ್ಲಾಂ ಖುಲ್ಲಾಂ ರೊಮ್ಯಾನ್ಸ್: ಶಾಕ್ ಆದ ಪ್ರಯಾಣಿಕರು
ನಯೀಮುಂಬೈ ಬಳಿ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವ ಜೋಡಿಯ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೇ ನಡೆದುಕೊಂಡ ಜೋಡಿಗೆ ಎಲ್ಲರೂ ಛೀಮಾರಿ ಹಾಕಿದ್ದಾರೆ.
ಯುವ ಜೋಡಿ ಅಪ್ಪರ್ ಬರ್ತ್ ನ ಮೇಲಿನ ಸೀಟ್ ನಲ್ಲಿ ಇಹಲೋಕದ ಅರಿವೂ ಇಲ್ಲದೇ ತಮ್ಮ ಬೆಡ್ ರೂಂನಲ್ಲಿದ್ದೇವೇನೋ ಎಂಬಂತೆ ರೊಮ್ಯಾನ್ಸ್ ನಲ್ಲಿ ತೊಡಗಿದ್ದರು. ವಿಪರ್ಯಾಸವೆಂದರೆ ಕೆಳಗಿನ ಸೀಟು ತುಂಬಾ ಪ್ರಯಾಣಿಕರಿದ್ದಾರೆ.
ರೈಲಿನಲ್ಲಿ ನಿಂತು ಕೊಂಡು ಮತ್ತು ಅತ್ತಿತ್ತ ಓಡಾಡುವ ಪ್ರಯಾಣಿಕರು ಈ ಯುವ ಜೋಡಿಯ ಸರಸ ಸಲ್ಲಾಪವನ್ನು ಕಂಡು ಮುಖ ತಿರುಗಿಸಿಕೊಂಡು ಹೋಗುತ್ತಿರುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.