Viral Video: ಯುವತಿ ಜೊತೆ ಚಲಿಸುತ್ತಿದ್ದ ರೈಲಿನಲ್ಲಿ ಡ್ಯಾನ್ಸ್ ಮಾಡಿದ ಪೊಲೀಸಪ್ಪ: ಮುಂದೇನಾಯ್ತು ನೋಡಿ

Krishnaveni K

ಶನಿವಾರ, 12 ಏಪ್ರಿಲ್ 2025 (09:16 IST)
Photo Credit: X
ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ಯುವತಿ ಜೊತೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದ್ದು, ಈತನ ಪರಿಸ್ಥಿತಿ ಈಗ ಏನಾಗಿದೆ ನೋಡಿ.

ಮುಂಬೈ ಸಿಟಿ ಲೋಕಲ್ ಟ್ರೈನ್ ನಲ್ಲಿ ಯುವತಿಯೊಬ್ಬಳು ಬಿಂದಾಸ್ ಆಗಿ ಪೊಲೀಸ್ ಅಧಿಕಾರಿಯ ಎದುರೇ ಡ್ಯಾನ್ಸ್ ಮಾಡುತ್ತಿದ್ದಳು. ಅವಳನ್ನೇ ಪೊಲೀಸ್ ಅಧಿಕಾರಿ ಗಂಭಿರವಾಗಿ ನಿಂತು ನೋಡುತ್ತಿದ್ದರು.

ಪೊಲೀಸ್ ಅಧಿಕಾರಿ ತನ್ನನ್ನು ನೋಡುತ್ತಿದ್ದುದನ್ನು ನೋಡಿ ತನ್ನ ಜೊತೆ ಸೇರಿಕೊಳ್ಳುವಂತೆ ಯುವತಿ ಕೇಳಿಕೊಳ್ಳುತ್ತಾಳೆ. ಮೊದಲು ಗಂಭಿರವಾಗಿರುವ ಪೊಲೀಸ್ ಅಧಿಕಾರಿ ಬಳಿಕ ಮೈ ಚಳಿ ಬಿಟ್ಟು ಸ್ಟೆಪ್ಸ್ ಹಾಕುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದು ಮುಂಬೈ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಈ ಅಧಿಕಾರಿಯನ್ನು ಈಗ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಒಂದು ಡ್ಯಾನ್ಸ್ ಮಾಡಲು ಹೋಗಿ ಅಧಿಕಾರಿ ಕೆಲಸವನ್ನೇ ಕಳೆದುಕೊಳ್ಳುವ ಪರಿಸ್ಥಿತಿಯಾಗಿದೆ.

Mumbai police officer lands in trouble after a video of his impromptu dance with a woman on a local train goes viral.#MumbaiPolice

Read more: https://t.co/oJ0tynMjy2 pic.twitter.com/Q3pcyGTC3a

— editorji (@editorji) December 14, 2023

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ