ವೈರಸ್ : ಭಾರತಕ್ಕೆ ಮುಂದಿನ 40 ದಿನ ನಿರ್ಣಾಯಕ

ಶುಕ್ರವಾರ, 30 ಡಿಸೆಂಬರ್ 2022 (14:09 IST)
ಬೀಜಿಂಗ್ : ಚೀನಾದಲ್ಲಿ ಕೋವಿಡ್ ಆರ್ಭಟ ನಿಲ್ತಿಲ್ಲ. ದಿನವೂ ಲಕ್ಷಾಂತರ ಮಂದಿ ಸೋಂಕು ಪೀಡಿತರಾಗ್ತಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಾಲು ಹೆಚ್ತಿದೆ.

ಕೇಂದ್ರ ಸರ್ಕಾರ ಸೋಂಕು ನಿಯಂತ್ರಣ ಕ್ರಮ ಕೈಗೊಳ್ತಿದ್ರೂ ದೇಶದಲ್ಲಿ ಸೋಂಕು ಹೆಚ್ಚುವ ಅವಕಾಶಗಳಿವೆ. ಭಾರತಕ್ಕೆ ಮುಂದಿನ 40 ದಿನ ಅತ್ಯಂತ ನಿರ್ಣಾಯಕ. ಈ ಅವಧಿಯಲ್ಲಿ ಸೋಂಕು ಸ್ಫೋಟಿಸದಿದ್ರೆ ನಾವು ಗೆದ್ದಂತೆ. ಜನವರಿ ತಿಂಗಳು ಭಾರತದ ಪಾಲಿಗೆ ಕ್ರಿಟಿಕಲ್.

ಫೆಬ್ರವರಿ 10 ವರೆಗೂ ಹುಷಾರಾಗಿ ಇರಬೇಕು ಎಂದು ದೇಶವಾಸಿಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಮತ್ತೊಂದು ಅಲೆ ಬಂದ್ರೂ ಕೋವಿಡ್ ಮರಣಗಳು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತುಂಬಾ ಕಡಿಮೆ ಇರುತ್ತೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಆತಂಕದ ಮಧ್ಯೆ ಕರ್ನಾಟಕ ರಾಜ್ಯದಲ್ಲಿ ಕೋವಿಶೀಲ್ಡ್ಗೆ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಕೋವಿಶೀಲ್ಡ್ ಬದಲಾಗಿ ಕಾರ್ಬೇವ್ಯಾಕ್ಸ್ ಲಸಿಕೆಯನ್ನು ಬೂಸ್ಟರ್ ಡೋಸ್ ರೂಪದಲ್ಲಿ ನೀಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ