ನಿರ್ಮಾಣ ಮಾಡುತ್ತಿರುವಾಗಲೇ ಕುಸಿದ ಗೋಡೆ, ಹಲವರಿಗೆ ಗಾಯ, Video

Sampriya

ಗುರುವಾರ, 2 ಏಪ್ರಿಲ್ 2026 (15:47 IST)
Photo Credit X
ಅಮ್ರೋಹಾದಲ್ಲಿ ನಿರ್ಮಾಣ ಕಾರ್ಯದ ವೇಳೆ ಇದ್ದಕ್ಕಿದ್ದಂತೆ ಗೋಡೆ ಕುಸಿದು ಹಲವು ಕಾರ್ಮಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ. 

ಈ ಘಟನೆಯೂ ಅಲ್ಲೇ ಸಮೀಪದಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಅಮ್ರೋಹ ನಗರ ಕೊತ್ವಾಲಿ ಪ್ರದೇಶದ ಬೈಪಾಸ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಅವಘಡ ಸಂಭವಿಸಿದಾಗ ಕಾರ್ಮಿಕರು ಗೋಡೆ ನಿರ್ಮಿಸುತ್ತಿದ್ದರು.

ಏಕಾಏಕಿ ಗೋಡೆ ಕುಸಿದು ಬಿದ್ದ ಪರಿಣಾಮ ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಅಕ್ಕಪಕ್ಕದಲ್ಲಿದ್ದವರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಗೊಂಡ ಎಲ್ಲಾ ಕಾರ್ಮಿಕರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

????Amroha, Uttar Pradesh: A wall suddenly collapsed during construction work in Bypass Mohalla, injuring several workers. The accident, which caused panic at the site, was captured on CCTV. Injured workers were rushed to the hospital. pic.twitter.com/4apW1ASWBK

— Deadly Kalesh (@Deadlykalesh) April 2, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ