ಈ ವಿಡಿಯೋ ನೋಡಿದ್ರೆ ಆಂಬ್ಯುಲೆನ್ಸ್ ಡ್ರೈವರ್‌ಗಳ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ

Sampriya

ಭಾನುವಾರ, 15 ಮಾರ್ಚ್ 2026 (12:53 IST)
Photo Credit X
ಆಂಬ್ಯುಲೆನ್ಸ್‌ ವಾಹನ ಚಾಲಕರು ಯಾವಾಗಲು ತಮ್ಮ ಜೀವದ ಹಂಗನ್ನು ತೊರೆದು ಬೇರೊಂದು ಜೀವದ ಉಳಿವಿಗಾಗಿ ಪ್ರತಿನಿತ್ಯಲೂ ಹೋರಾಟವನ್ನು ನಡೆಸುತ್ತಲೆ ಇರುತ್ತಾರೆ. 

ಇಲ್ಲೊಬ್ಬ ಆಂಬುಲೆನ್ಸ್ ವಾಹನ ಚಾಲಕನೊಬ್ಬ ತನಗೆ ತುರ್ತು ಕರೆ ಬಂದಾಗ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯಾಗಿದೆ. ಇದು ಯಾವ ರಾಜ್ಯದಲ್ಲಿ ನಡೆದಿದೆ ಎಂದು ವರದಿಯಾಗಿಲ್ಲ. 

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಆಂಬ್ಯುಲೆನ್ಸ್ ಚಾಲಕ ಆಸ್ಪತ್ರೆಯ ಒಳಗಡೆ ಫೋನ್ ನೋಡುತ್ತಾ ಕುಳಿತಿರುತ್ತಾನೆ. ಆಗ ಆತನಿಗೆ ತುರ್ತು ಕರೆ ಬರುತ್ತದೆ. ಹಿಂದೆ ಮುಂದೆ ಯೋಚಿಸದ ಚಾಲಕ, ಸ್ಟ್ರೆಚ್ಚರನ್ನು ಹಿಡಿದು ರೋಗಿಯನ್ನು ಕರೆತರಲು ಹೊರಡುತ್ತಾನೆ. ‌

ಚಾಲಕನ ಸಮಯ ಪ್ರಜ್ಞೆ, ಮಾನವೀಯ ಗುಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಈ ವಿಡಿಯೋ ನೋಡಿದಾಗ ಆಂಬ್ಯುಲೆನ್ಸ್ ಡ್ರೈವರ್‌ಗಳ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುವಂತೆ ಮಾಡುತ್ತದೆ. 



 

Some Heroes don't wear Capes pic.twitter.com/uvbISVE4JR

— Lolflix (@lolflix_) March 14, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ