ಪ್ರಧಾನಿ ಮೋದಿಗೆ ಸಮನಾಗಿ ನಿಲ್ಲುವ ನಾಯಕ ಇನ್ನೂ ಹುಟ್ಟಿಲ್ಲ: ಒಮರ್ ಅಬ್ದುಲ್ಲಾ

ಶನಿವಾರ, 11 ಮಾರ್ಚ್ 2017 (12:30 IST)
ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ಬಿಜೆಪಿ ಪ್ರಚಂಡ ಗೆಲುವು ನೋಡಿದ ಮೇಲೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸದ್ಯಕ್ಕೆ ಪ್ರಧಾನಿ ಮೋದಿ ಎದುರು ನಿಲ್ಲಬಲ್ಲ ನಾಯಕರೇ ಇಲ್ಲ ಎಂದಿದ್ದಾರೆ.

 
2019  ರ ಚುನಾವಣೆ ಬಿಡಿ. 2024 ರ ಬಗ್ಗೆ ಆಲೋಚನೆ ಮಾಡಿ. ಅಲ್ಲಿಯವರೆಗೆ ಪ್ರಧಾನಿ ಮೋದಿಯನ್ನು ಮೀರಿಸುವ ನಾಯಕರೇ ಇಲ್ಲ. ಅಂತಹ ನಾಯಕ ಇನ್ನೂ ಹುಟ್ಟಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಪಂಚ ರಾಜ್ಯ ಚುನಾವಣೆಗಳ ಫಲಿತಾಂಶ ನೋಡಿದ ಮೇಲೆ ಅವರು ಈ ರೀತಿ ಹೇಳಿದ್ದಾರೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಬಹುತಮ ಪಡೆದಿರುವುದು ಬಿಟ್ಟರೆ, ಉಳಿದ ರಾಜ್ಯಗಳಲ್ಲಿ ಬಿಜೆಪಿಯೇ ಮುನ್ನಡೆಯಲ್ಲಿರುವುದು ಅವರ ಈ ಮಾತಿಗೆ ಕಾರಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ