ನೆರೆಮನೆಯವರು ಎಂದು ನಂಬಿ ಮನೆಯೊಳಗೆ ಹೋದ ಹುಡುಗಿಗೆ ಮೂವರು ಹುಡುಗರು ಮಾಡಿದ್ದೇನು?
ಶನಿವಾರ, 10 ಅಕ್ಟೋಬರ್ 2020 (08:44 IST)
ಗ್ರೇಟರ್ ನೊಯ್ಡಾ : 13 ವರ್ಷದ ಹುಡುಗಿಯ ಮೇಲೆ ನೆರೆಮನೆಯಲ್ಲಿರುವ ಮೂವರು ಕಾಮುಕರು ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.
ಹುಡುಗಿಯ ಪರಿಚಯವಿರುವ ಈ ಯುವಕರು ಹುಡುಗಿಯನ್ನು ತಮ್ಮ ಬಳಿಗೆ ಬರುವಂತೆ ಹೇಳಿ ಅಲ್ಲಿ ಮಾನಭಂಗ ಎಸಗಿದ್ದಾರೆ. ಈ ಬಗ್ಗೆ ಹುಡುಗಿ ತನ್ನ ತಾಯಿಗೆ ತಿಳಿಸಿದ ಕಾರಣ ತಾಯಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈಗಾಗಲೇ ಆರೋಪಿಗಳನ್ನು ಬಂಧಿಸಿದ ಪೊಲೀಸರು ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.