ಮಧ್ಯಂತರ ಜಾಮೀನಿನ 21 ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ಏನು ಮಾಡಬಹುದು, ಮಾಡಬಾರದು ಇಲ್ಲಿದೆ ವಿವರ

Krishnaveni K

ಶುಕ್ರವಾರ, 10 ಮೇ 2024 (16:56 IST)
ನವದೆಹಲಿ: ಅಬಕಾರಿ ಅಕ್ರಮ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಇದೀಗ ಕೋರ್ಟ್ ಮಧ‍್ಯಂತರ ಜಾಮೀನು ಮಂಜೂರು ಮಾಡಿದೆ. ಮುಂದಿನ ಜನವರಿ 2 ರವರೆಗೂ ಕೇಜ್ರಿವಾಲ್ ಬಿಡುಗಡೆಯ ಭಾಗ್ಯ ಅನುಭವಿಸಲಿದ್ದಾರೆ

ಜೂನ್ 2 ರಂದು ಮತ್ತೆ ಕೋರ್ಟ್ ಮುಂದೆ ಶರಣಾಗಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೋರ್ಟ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ನೀಡಿದೆ. ಈ ಕಾಲಾವಧಿಯಲ್ಲಿ ಅವರು ಏನು ಮಾಡಬಹುದು, ಏನು ಮಾಡಬಾರದು ಎಂಬ ಬಗ್ಗೆ ಕೋರ್ಟ್ ಷರತ್ತು ವಿಧಿಸಿದೆ.

ಬಂಧನಕ್ಕೊಳಗಾಗಿದ್ದರೂ ಕೇಜ್ರಿವಾಲ್ ಇದುವರೆಗೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಆದರೆ ಈಗ ಬಿಡುಗಡೆಯಾಗಿದೆ ಎಂಬ ಮಾತ್ರಕ್ಕೆ ಅವರು ಮುಖ್ಯಮಂತ್ರಿಗಳ ಕಚೇರಿಗೆ ಹೋಗಿ ಆಡಳಿತ ನಡೆಸುವಂತಿಲ್ಲ. ತಮ್ಮ ಕಚೇರಿಗೆ ಅವರು ಭೇಟಿ ಕೊಡುವಂತಿಲ್ಲ.

ಇನ್ನು, ಮಾಧ್ಯಮಗಳ ಮುಂದೆ ದೆಹಲಿ ಅಬಕಾರಿ ಅಕ್ರಮದಲ್ಲಿ ತನ್ನ ಪಾತ್ರದ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡುವಂತಿಲ್ಲ. ತಿಹಾರ್ ಜೈಲಿನಿಂದ ಬಿಡುಗಡೆಯಾಗಬೇಕಾದರೆ 50,000 ರೂ.ಗಳ ಶ್ಯೂರಿಟಿ ಬಾಂಡ್ ನೀಡಬೇಕು. ಈ ಮಧ್ಯಂತರ ಜಾಮೀನು ಅವಧಿಯಲ್ಲಿ ಯಾವುದೇ ಕಡತಗಳಿಗೆ, ಸರ್ಕಾರಿ ಆದೇಶಗಳಿಗೆ ಅವರು ಸಹಿ ಹಾಕುವಂತಿಲ್ಲ. ಒಂದು ವೇಳೆ ಅನಿವಾರ್ಯವಾದರೆ ಅದಕ್ಕೆ ಲೆಫ್ಟಿನೆಂಟ್ ಜನರಲ್ ಅನುಮೋದನೆ ಬೇಕು.

ಮಧ್ಯಂತರ ಜಾಮೀನು ಕಾಲಾವಧಿಯಲ್ಲಿ ಕೇಜ್ರಿವಾಲ್ ಗೆ ತಮ್ಮ ಪಕ್ಷದ ಪರ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಈ 21 ದಿನಗಳ ಬಿಡುಗಡೆ ಅವರ ಮೇಲಿನ ಆರೋಪಗಳನ್ನು ಇಲ್ಲವಾಗಿಸದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ