ಕೆಂಪುಕೋಟೆಯಲ್ಲಿ ಮೋದಿ ಭಾಷಣದ ವಿಶೇಷತೆ ಏನು?

ಮಂಗಳವಾರ, 16 ಆಗಸ್ಟ್ 2022 (10:18 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 9ನೇ ಬಾರಿಗೆ ದೆಹಲಿಯ ಕೆಂಪುಕೋಟೆಯಲ್ಲಿ ನಿಂತು ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.
 
ಈ ವೇಳೆ ಈ ಹಿಂದೆ ಅವರು ಭಾಷಣ ಮಾಡುತ್ತಿದ್ದಾಗ ಬಳಸುತ್ತಿದ್ದ ಟೆಲಿಪ್ರಾಂಪ್ಟರ್ ಬದಲಿಗೆ ಕಾಗದದ ಚೀಟಿಗಳನ್ನು ಬಳಕೆ ಮಾಡಿದ್ದು ಕಂಡುಬಂತು.

ಪ್ರತಿಬಾರಿ ಮೋದಿ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಬಳಕೆ ಮಾಡಲಾಗುತ್ತಿತ್ತು. ಆದರೆ ಇಂದು ಪ್ರಧಾನಿ ಭಾಷಣದಲ್ಲಿ ಒಂದು ವ್ಯತ್ಯಾಸ ಮುಖ್ಯವಾಗಿ ಎದ್ದು ಕಂಡಿದ್ದು, ಮೋದಿ ಟೆಲಿಪ್ರಾಂಪ್ಟರ್ ಬದಲಿಗೆ ಕಾಗದದ ಚೀಟಿಗಳಲ್ಲಿ ಬರೆದು ತಂದಿದ್ದ ಅಂಶಗಳನ್ನು ಆಧರಿಸಿ ಭಾಷಣ ಮಾಡಿದರು. 

ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿ ಅಮೃತ ಮಹೋತ್ಸವ ಆಚರಿಸುತ್ತಿರುವ ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಪ್ರಧಾನಿ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆ ಟೆಲಿಪ್ರಾಂಪ್ಟರ್ ಪಕ್ಕಕ್ಕೆ ಸರಿಸಲಾಯಿತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ