ಜುಲೈನಲ್ಲಿ ಸಂಗ್ರಹವಾದ ಜಿಎಸ್‌ಟಿ ಆದಾಯ ಎಷ್ಟು?

ಸೋಮವಾರ, 1 ಆಗಸ್ಟ್ 2022 (15:51 IST)
ನವದೆಹಲಿ : ಕೇಂದ್ರ ಹಣಕಾಸು ಇಲಾಖೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಸಿಕ ಮಾಹಿತಿಯನ್ನು ನೀಡಿದ್ದು, ಏಪ್ರಿಲ್ನಲ್ಲಿ 1.49 ಲಕ್ಷ ಕೋಟಿ ರೂ. ಸಂಗ್ರಹಿದೆ.

ಜಿಎಸ್ಟಿ ಜಾರಿಯಾದ ಬಳಿಕ ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಶೇ.28 ರಷ್ಟು ಜಿಎಸ್ಟಿ ಸಂಗ್ರಹ ಹೆಚ್ಚಳವಾಗಿದೆ.

ಈ ತಿಂಗಳ ಜೂನ್ ತಿಂಗಳಿಗೆ ಹೋಲಿಸಿದರೆ ಶೇ.3 ರಷ್ಟು ಹೆಚ್ಚಳವಾಗಿದೆ. ಜೂನ್ನಲ್ಲಿ 1.44 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು. ಈ ವರ್ಷದ ಏಪ್ರಿಲ್ನಲ್ಲಿ 1.68 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು. ಏಪ್ರಿಲ್ನ ಜಿಎಸ್ಟಿ ಸಂಗ್ರಹ ಸಾರ್ವಕಾಲಿಕ ಗರಿಷ್ಠವಾಗಿದೆ.

ಜಿಎಸ್ಟಿ ಸಂಗ್ರಹದ ಪೈಕಿ ಸೆಂಟ್ರಲ್ ಜಿಎಸ್ಟಿ 25,751 ಕೋಟಿ ರೂ., ಸ್ಟೇಟ್ ಜಿಎಸ್ಟಿ 32,807 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್ಟಿ(ಭಾರತಕ್ಕೆ ಆಮದು ಮಾಡಿಕೊಳ್ಳುವ ಮತ್ತು ಭಾರತದಿಂದ ರಫ್ತು ಮಾಡುವ ಸಂದರ್ಭಗಳಲ್ಲಿ ಸರಕು ಮೇಲೆ ಹಾಕುವ ತೆರಿಗೆ) 79,518 ಕೋಟಿ ರೂ., ಸೆಸ್ ಮೂಲಕ 10,920 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ