ಇಂಟರ್ನೆಟ್ ನಲ್ಲಿ ಕುಳಿತು ಆರ್ಡರ್ ಮಾಡಿದರೆ ಸಾಕು ಮನೆಬಾಗಿಲಿಗೆ ಬಿಸಿಬಿಸಿಯಾದ ನಾವು ಮೆಚ್ಚಿದ ಆಹಾರ ಪದಾರ್ಥ ಬಂದು ಸಿಗಲಿದೆ.
ಹೀಗಾಗಿ ಸಮಯ ಉಳಿತಾಯ ಮಾಡಿಕೊಂಡು ಹಸಿವಾದ ತಕ್ಷಣ ಮನೆಯಲ್ಲಿ ಕುಳಿತು ರುಚಿಯಾದ ಆಹಾರ ಪದಾರ್ಥ ಸೇವಿಸಲು ಎಷ್ಟು ಜನರು ಫುಡ್ ಡೆಲಿವರಿ ಆಪ್ ಗಳ ಮೊರೆ ಹೋಗುತ್ತಾರೆ. ಇಂತಹ ಫುಡ್ ಡೆಲಿವರಿ ಆಪ್ ಗಳಲ್ಲಿ ಝೊಮಾಟೊ ಕೂಡ ಒಂದು.
ಸದ್ಯ ಸಾಕಷ್ಟು ವಿವಾದ ಹಾಗೂ ತನ್ನ ಗ್ರಾಹಕರ ಮೆಚ್ಚುಗೆಯಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿರುವ ಝೊಮಾಟೊ ದೇಶದ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ 2021ರಲ್ಲಿ ಫುಡ್ ಡೆಲಿವರಿಯಲ್ಲಿ ಆದ ಹಲವು ಮಹತ್ವದ ವಿಷಯಗಳ ಬಗ್ಗೆ ಝೊಮಾಟೊ ಮಾಹಿತಿ ಬಿಡುಗಡೆ ಮಾಡಿದೆ.
ಕೊರೊನಾ ಹಾವಳಿ ಹೆಚ್ಚಾದ ಮೇಲೆ ಜನರು ಬೀದಿಬದಿಗೆ ಹೋಗಿ ವಸ್ತುಗಳನ್ನು ಸೇವನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಬೀದಿಬದಿ ತಯಾರಾಗುವ ತಿಂಡಿಗಳ ಮೇಲೆ ಹೆಚ್ಚು ಪ್ರೀತಿ ಹೊಂದಿರುವ ಜನರು ತಿನಿಸುಗಳನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿಕೊಂಡು ಹೆಚ್ಚು 2021ರಲ್ಲಿ ಸವಿದಿದ್ದಾರೆ.
ಅದರಲ್ಲೂ ಝೊಮಾಟೊ ಪ್ರಕಾರ 2021ರಲ್ಲಿ ಜನರು ಹೆಚ್ಚು ಆರ್ಡರ್ ಮಾಡಿದ ತಿನಿಸಿನಲ್ಲಿ ಮೊಮೋಸ್ ಕೂಡ ಒಂದು. ಬರೋಬರಿ 1.06 ಕೋಟಿ ಗೂ ಅಧಿಕ ಜನರು 2021ರಲ್ಲಿ ಮೊಮೊಸ್ ಗಳನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದಾರೆ.