ಪಾಕಿಸ್ತಾನಕ್ಕೆ ಭಾರತದೊಂದಿಗೆ ವ್ಯಾಪಾರಿ ಸಂಬಂಧ ಬೇಡ್ವಂತೆ...!

ಶುಕ್ರವಾರ, 28 ಅಕ್ಟೋಬರ್ 2016 (17:55 IST)
ಇಸ್ಲಾಮಾಬಾದ್: ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ದಿನೇ ದಿನೆ ಹದಗೆಡುತ್ತಿದ್ದು, ಅದರಿಂದ ಪಾಕಿಸ್ತಾನ ಭಾರತದೊಂದಿಗಿನ ವ್ಯಾಪಾರ, ವಹಿವಾಟುಗಳನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಕುರಿತು ಪಾಕಿಸ್ತಾನದ ಪ್ರಮುಖ ಪತ್ರಿಕೆಯಾದ ಡಾನ್ ವರದಿ ಮಾಡಿದ್ದು, ದ್ವಿಪಕ್ಷೀಯ ಸಂಬಂಧ ಶೀಘ್ರ ಸುಧಾರಣೆಯಾಗದಿದ್ದರೆ ನಿವಾರ್ಯವಾಗಿ ಪಾಕಿಸ್ತಾನ ಭಾರತದೊಂದಿನ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಲಿದೆ. ಸದ್ಯ ಪಾಕಿಸ್ತಾನ ವ್ಯಾಪಾರೋದ್ಯಮದಲ್ಲಿ ಶಸಕ್ತವಾಗಿದ್ದು, ಭಾರತವನ್ನು ಅವಲಂಬಿಸಬೇಕಾದ ಜರೂರತ್ ಇಲ್ಲ. ವ್ಯಾಪಾರ-ವಹಿವಾಟಿಗೆ ಸಂಬಂಧಿಸಿ ಉದ್ಯಮಗಳು ಇತ್ತೀಚೆ ಗಣನೀಯ ಪ್ರಮಾಣದಲ್ಲಿ ಸುಧಾರಣೆ ಕಂಡಿವೆ ಎಂದು ಪಾಕಿಸ್ತಾನದ ವಾಣಿಜ್ಯ ಒಕ್ಕೂಟ ತಿಳಿಸಿರುವುದಾಗಿ ಡಾನ್ ವರದಿ ಮಾಡಿದೆ.
 
ಸಾಕಷ್ಟು ಕೋಟಿ ರು.ಗಳ ಬಂಡವಾಳ ತೊಡಗಿಸಿ ಭಾರತದೊಂದಿಗೆ ವ್ಯಾಪಾರ ವೃದ್ಧಿ ಮಾಡಿಕೊಳ್ಳುವ ಮೂಲಕ ಉತ್ತಮ ಸಂಬಂಧ ಇಟ್ಟುಕೊಂಡು ಬಂದಿದ್ದೇವು. ಆದರೆ ಇತ್ತೀಚಿನ ದಿನಗಳಲ್ಲಿ ದ್ವಿಪಕ್ಷೀಯ ಸಂಬಂಧ ತೀರಾ ಹಾಳಾಗುತ್ತಿದೆ. ವ್ಯಾಪಾರ ವಹಿವಾಟಿಗೂ ತೊಡಕಾಗುತ್ತಿದೆ. ಸಾವಿರಾರು ವ್ಯಾಪಾರಸ್ಥರು ಸಹ ಕೋಟಿಗಟ್ಟಲೇ ನಷ್ಟ ಅನುಭವಿಸುತ್ತಿದ್ದಾರೆ. ಶೀಘ್ರ ಇದಕ್ಕೊಂದು ತಾಕರ್ಿಕ ಅಂತ್ಯ ದೊರಕದಿದ್ದರೆ ಹಿಂದೆಮುಂದೆ ನೋಡದೆ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುತ್ತೇವೆ ಎಂದು ಪಾಕಿಸ್ತಾನದ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅಬ್ದುಲ್ ರೌಫ್ ಆಲಂ ಹೇಳಿರುವುದಾಗಿ ಪತ್ರಿಕೆ ಪ್ರಕಟಿಸಿದೆ.
 
ಅಲ್ಲದೆ, ಭಾರತದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸುವ ಬಗ್ಗೆ ಪಾಕಿಸ್ತಾನದ ಉದ್ಯಮಿಗಳು ಸಹ ಒಗ್ಗಟ್ಟಿನಿಂದ ಇದ್ದು, ಮುಂಬರುವ ದಿನಗಳಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅಬ್ದುಲ್ ರೌಫ್ ಆಲಂ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ