ರಾಹುಲ್ ಅಕ್ರಮ ಬಂಧನದ ವಿರುದ್ಧ ಎಫ್ಐಆರ್ ಏಕಿಲ್ಲ: ದಿಗ್ವಿಜಯ್ ಸಿಂಗ್

ಶುಕ್ರವಾರ, 4 ನವೆಂಬರ್ 2016 (15:03 IST)
ಒಆರ್‌ಒಪಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಎರಡು ದಿನಗಳಲ್ಲಿ ಮೂರು ಬಾರಿ ಬಂಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ದೆಹಲಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. 
 
ಯೋಧ ರಾಮ್ ಕಿಶನ್ ಗ್ರೇವಾಲ್ ಅವರ ಆತ್ಮಹತ್ಯೆಯನ್ನು ಖಂಡಿಸಿ ಕೈಗೊಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿಯವರನ್ನು ಕಳೆದ ಎರಡು ದಿನಗಳಲ್ಲಿ ಮೂರು ಬಾರಿ ಬಂಧಿಸಲಾಗಿತ್ತು. 
 
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದಡಿಯಲ್ಲಿ ಬರುವ ದೆಹಲಿ ಪೊಲೀಸರ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿರುವ ಸಿಂಗ್, ಮಾಜಿ ಯೋಧನ ಸ್ಮರಣೆಯಲ್ಲಿ ರಾಜಕೀಯ ನಾಯರೊಬ್ಬರು ಶಾಂತಿಯುತವಾದ ಮೋಂಬತ್ತಿ  ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ. 
 
ಕಾನೂನಿನ ಯಾವ ನಿಬಂಧನೆಗಳ ಅಡಿಯಲ್ಲಿ ರಾಹುಲ್ ಅವರನ್ನು ಎರಡು ದಿನಗಳಲ್ಲಿ ಮೂರು ಬಾರಿ ಬಂಧಿಸಲಾಗಿದೆ. ಈ ಅಕ್ರಮ ಬಂಧನದ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್‌ನ್ನು ದಾಖಲಿಸಿಲ್ಲ ಎಂದು ಸಿಟಿ ಪೊಲೀಸರಿಗೆ ಅವರು ಸವಾಲೆಸೆದಿದ್ದಾರೆ. 
 
ಕಾಂಗ್ರೆಸ್ ಉಪಾಧ್ಯಕ್ಷ, ಸಂಸದನ ಜತೆಗೆ ದೆಹಲಿಯಲ್ಲಯೇ ಪೊಲೀಸರು ಹೀಗೆ ವರ್ತಿಸುತ್ತಿದ್ದಾರೆ ಎಂದರೆ ಗ್ರಾಮೀಣ ಭಾಗದಲ್ಲಿ ಸಾಮಾನ್ಯ ಮನುಷ್ಯನ ಜತೆ ಏನಾಗಿರುತ್ತಿರಬೇಡ ಎಂದು ಅವರು ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ