ಮಾಯಾವತಿ ಯಾವಾಗಲೂ ಲಿಖಿತ ಭಾಷಣ ಓದುವುದೇಕೆ ಗೊತ್ತಾ?

ಶನಿವಾರ, 15 ಏಪ್ರಿಲ್ 2017 (08:16 IST)
ನವದೆಹಲಿ: ಬಿಎಸ್ ಪಿ ನಾಯಕಿ ಮಾಯಾವತಿ ಯಾವುದೇ ಭಾಷಣವಿರಲಿ ಬರೆದಿಟ್ಟುಕೊಂಡಿದ್ದನ್ನು ಓದುತ್ತಾರೆ. ಸ್ವತಃ ಭಾಷಣ ಮಾಡುವುದು ಕಡಿಮೆ. ತಾನೇಕೆ ಹಾಗೆ ಮಾಡುತ್ತೇನೆಂದು ಸ್ವತಃ ಮಾಯಾವತಿ ಹೇಳಿಕೊಂಡಿದ್ದಾರೆ.

 

ಅದಕ್ಕೊಂದು ಕಾರಣವಿದೆ. 1996 ರಲ್ಲಿ ಅವರಿಗೆ ಒಂದು ಶಸ್ತ್ರಚಿಕಿತ್ಸೆಯಾಗಿತ್ತಂತೆ. ಆ ಸಂದರ್ಭದಲ್ಲಿ ತನ್ನ ಗಂಟಲಿನ ಸಮಸ್ಯೆಯಿಂದಾಗಿ ಒಂದು ಗ್ರಂಥಿ ಕಿತ್ತು ಹಾಕಲಾಯಿತು. ಅದರ ನಂತರ ವೈದ್ಯರು ತನಗೆ ಜಾಸ್ತಿ ಗಂಟಲಿಗೆ ಒತ್ತಡ ತರಬೇಡಿ ಎಂದರು.

 
ಅಲ್ಲದೆ, ಆದಷ್ಟು ಬರೆದ ಭಾಷಣ ಓದುವಂತೆ ಸಲಹೆ ನೀಡಿದರು ಎಂದು ಮಾಯಾವತಿ ಹೇಳಿಕೊಂಡಿದ್ದಾರೆ. ಮೊದಲೆಲ್ಲಾ ಬರೆದು ಭಾಷಣ ಮಾಡಲು ಕಷ್ಟವಾಗುತ್ತಿತ್ತು ಆದರೆ ಈಗ ರೂಡಿಯಾಗಿದೆ ಎಂದಿದ್ದಾರೆ ಅವರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ