ಚೀನಾ ವಿಷಯದಲ್ಲಿ ಪ್ರಧಾನಿ ಮೋದಿ ಮೌನವೇಕೆ?: ರಾಹುಲ್ ಗಾಂಧಿ ಕಿಡಿ

ಶುಕ್ರವಾರ, 7 ಜುಲೈ 2017 (15:57 IST)
ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದ್ದರೂ ಪ್ರಧಾನಿ ಮೋದಿ ಏಕೆ ಮಾನವಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
 
ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್ ಪಿಂಗ್ ನಡುವಿನ ದ್ವಿಪಕ್ಷೀಯ ಮಾತುಕತೆ ರದ್ದಾಗಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
 
ಚೀನಾ ಯುದ್ಧ ಬೇಕೋ ಶಾಂತಿ ಬೇಕೋ ಎಂದು ಬೆದರಿಕೆ ಹಾಕುತ್ತಿದ್ದರೂ ಅದರ ಬಗ್ಗೆ ಒಂದೇ ಒಂದು ಹೇಳಿಕೆ ನೀಡದ ಪ್ರಧಾನಿ ಮೌನ ಆಘಾತ ತಂದಿದೆ. ಶತ್ರುಗಳು ಗಡಿಯೊಳಗೆ ನುಗ್ಗುತ್ತಿದ್ದರೂ ಅವರನ್ನು ತಡೆಯುವ ನಿಟ್ಟಿನಲ್ಲಿ ಭಾರತ ದ್ವಿಪಕ್ಷೀಯ ಮಾತುಕತೆಗೆ ಮುಂದಾಗುವುದು ಸೂಕ್ತ ಎಂದು ತಿಳಿಸಿದ್ದಾರೆ.
 
ಚೀನಾ ವಿಷಯವನ್ನು ಪ್ರಧಾನಿ ಮೋದಿ ಲಘುವಾಗಿ ಪರಿಗಣಿಸಿದಲ್ಲಿ  ಮುಂಬರುವ ದಿನಗಳಲ್ಲಿ ದೇಶ ಬಹುದೊಡ್ಡ ದಂಡ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ