ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾ ತ್ಯಜಿಸುತ್ತಿರುವುದರ ಹಿಂದಿದೆ ದೊಡ್ಡ ಕಾರಣ?!

ಮಂಗಳವಾರ, 3 ಮಾರ್ಚ್ 2020 (09:39 IST)
ನವದೆಹಲಿ: ಪ್ರಧಾನಿ ಮೋದಿ ತಮ್ಮ ಎಂದಿನ ಶೈಲಿಯಲ್ಲಿ ನಿನ್ನೆ ದಿಡೀರ್ ಆಗಿ ಇನ್ ಸ್ಟಾಗ್ರಾಂ, ಟ್ವಿಟರ್ ಖಾತೆಗಳಲ್ಲಿ ನಾನು ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾ ಪೇಜ್ ನಿಂದ ಹೊರಬರಲು ಚಿಂತನೆ ನಡೆಸಿದ್ದೇನೆ ಎಂದು ಸಂದೇಶ ಹಾಕಿದ್ದರು.


ಪ್ರಧಾನಿ ಮೋದಿ ಇಂತಹದ್ದೊಂದು ಸಂದೇಶ ಹಾಕಿದ ತಕ್ಷಣ ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಗಳು ಬಂದಿದ್ದು, ದಯವಿಟ್ಟು ಬಿಡಬೇಡಿ ಎಂದು ಕೆಲವರು ಮನವಿ ಮಾಡಿದ್ದೂ ಇದೆ. ಆದರೆ ಸಾಮಾಜಿಕ ಜಾಲತಾಣಗಳ ಪ್ರಭಾವದ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿರುವ ಮೋದಿ ಇದ್ದಕ್ಕಿದ್ದಂತೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ?

ಇದರ ಹಿಂದೆ ಕಾರಣ ಬೇರೆಯೇ ಇದೆ ಎಂದು ವಿಶ್ಲೇಷಿಸಲಾಗಿದೆ.ಇತ್ತೀಚೆಗಷ್ಟೇ ಕೇಂದ್ರ ಸ್ವದೇಶೀ ಆಪ್ ಒಂದನ್ನು ಹೊರತರುವ ಬಗ್ಗೆ ಚರ್ಚೆ ನಡೆಸಿತ್ತು. ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂನಂತಹ ವಿದೇಶೀ ಸೋಷಿಯಲ್ ಮೀಡಿಯಾ ಆಪ್ ಗಳಿಗೆ ಸಮನಾದ ದೇಶೀ ಆಪ್ ಒಂದನ್ನು ಲಾಂಚ್ ಮಾಡಬೇಕೆಂದು ಚರ್ಚೆಗಳು ನಡೆದಿತ್ತು. ಹಾಗಿದ್ದರೆ ಆ ದೇಶೀ ಆಪ್ ಈಗಾಗಲೇ ಅಂತಿಮಗೊಳಿಸಿರಬಹುದು. ಅದರ ಮೂಲಕ ಮೋದಿ ಇನ್ನು ದೇಶದ ಜನರೊಂದಿಗೆ ಕನೆಕ್ಟ್ ಆಗಿರಬಹುದು. ಆ ಮೂಲಕ ಹೊಸ ಆಪ್ ಗೆ ಚಾಲನೆ ನೀಡಲು ವಿದೇಶೀ ಆಪ್ ನಿಂದ ಹೊರಬರುವ ನಿರ್ಧಾರ ಮಾಡಿರಬಹುದು ಎಂಬ ಗುಮಾನಿ ಇದೆ. ಎಲ್ಲದಕ್ಕೂ ಈ ಭಾನುವಾರ ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ