ಐಸಿಜೆ ತೀರ್ಪು ನಾವೇಕೆ ಒಪ್ಪಬೇಕೆಂದ ಪಾಕಿಸ್ತಾನ

ಶುಕ್ರವಾರ, 19 ಮೇ 2017 (06:59 IST)
ಇಸ್ಲಾಮಾಬಾದ್: ಭಾರತೀಯ ನೌಕಾ ಪಡೆ ಮಾಜಿ ಅಧಿಕಾರಿಗೆ ವಿಧಿಸಿದ್ದ ಮರಣದಂಡನೆ ತೀರ್ಪಿಗೆ ತಡೆಯಾಜ್ಞೆ ವಿಧಿಸಿದ್ದ ಅಂತಾರಾಷ್ಟ್ರೀಯ ನ್ಯಾಯಾಲಯ ಐಸಿಜೆ ತೀರ್ಪನ್ನು ಒಪ್ಪಲಾಗದು ಎಂದು ಪಾಕಿಸ್ತಾನ ಹೇಳಿಕೊಂಡಿದೆ.

 
ವಿದೇಶಾಂಗ ವಕ್ತಾ ನಸೀಫ್ ಕುಲಭೂಷಣ್ ವಿರುದ್ಧ ಮತ್ತಷ್ಟು ಸಾಕ್ಷ್ಯ ಒದಗಿಸುವುದಾಗಿ ಹೇಳಿಕೊಂಡಿದ್ದಾರೆ. ಇದೆಲ್ಲಾ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಭಾರತದ ಪ್ರಯತ್ನ ಎಂದು ಅವರು ಟೀಕಿಸಿದ್ದಾರೆ.

‘ಇದು ದೇಶದ ಭದ್ರತೆಯ ವಿಚಾರ. ನಾವು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಸ್ವತಃ ಕುಲಭೂಷಣ್ ಎರಡು ಬಾರಿ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಸಾವಿರಾರು ಅಮಾಯಕ ಪಾಕಿಸ್ತಾನಿಯರ ಪ್ರಾಣ ಬಲಿ ತೆಗೆದ ಆತನನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಭಾರತ ಡೋಂಗಿತನ ತೋರುತ್ತಿದೆ. ನಮ್ಮ ಅಧಿಕಾರಿಗಳಿಗೆ ಭಾರತದಲ್ಲಿ ಆರೋಪಿ ವಿರುದ್ಧ ಸಾಕ್ಷ್ಯ ಕಲೆ ಹಾಕಲು ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಆದರೆ ಭಾರತದಲ್ಲಿ ಕುಲಭೂಷಣ್ ತೀರ್ಪಿನ ಪರ ಭಾರೀ ಸ್ವಾಗತ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ