ಮಧ್ಯರಾತ್ರಿ ಗಂಡನ ಮೇಲೆ ಕುದಿಯುವ ಎಣ್ಣೆ ಸುರಿದ ಖತರ್ನಾಕ್ ಲೇಡಿ: ಭಯಾನಕ ಸುದ್ದಿ
ದಿನೇಶ್ ಎಂಬಾತ ಖಾಸಗಿ ಕಂಪನಿಯೊಂದರಲ್ಲಿ ವೃತ್ತಿಯಲ್ಲಿದ್ದ. ಮೊನ್ನೆ ತಡರಾತ್ರಿ 3.15 ರ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದ ಆತನಿಗೆ ಮೈಮೇಲೆ ಏನೋ ಉರಿಯಾದ ಅನುಭವವಾಯಿತು. ಎಚ್ಚರವಾಗಿ ನೋಡಿದರೆ ಪಕ್ಕದಲ್ಲೇ ಕುದಿಯುವ ಎಣ್ಣೆ ಹಿಡಿದು ಪತ್ನಿ ನಿಂತಿದ್ದಳು. ಪತ್ನಿಯೇ ಮುಖ, ಮೂತಿ ಎಂದು ನೋಡದೇ ಮೈ ಮೇಲೆಲ್ಲಾ ಕುದಿಯುವ ಎಣ್ಣೆ ಸುರಿದಿದ್ದಳು. ಇದೂ ಸಾಲದೆಂಬಂತೆ ಖಾರದ ಪುಡಿ ಎರಚಿದ್ದಳು.
ಉರಿ, ನೋವು ತಾಳಲಾರದೇ ಗಂಡ ಕಿರುಚಲು ಹೊರಟಾಗ ಕಿರುಚಿದರೆ ಇನ್ನಷ್ಟು ಕುದಿಯುವ ಎಣ್ಣೆ ಸುರಿಯುವುದಾಗಿ ಬೆದರಿಕೆ ಹಾಕಿದ್ದಾಳೆ. ಇಷ್ಟೆಲ್ಲಾ ನಡೆಯುವಾಗ ಪಕ್ಕದಲ್ಲೇ ದಂಪತಿಯ 8 ವರ್ಷದ ಮಗಳೂ ಇದ್ದಳು.
ಅಷ್ಟಕ್ಕೂ ಪತ್ನಿ ಈ ಪರಿ ರೊಚ್ಚಿಗೆದ್ದು ಕೃತ್ಯವೆಸಗಿದ್ದು ಯಾಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಇದೀಗ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.