ಬಹುಮತ ಪರೀಕ್ಷೆಯಲ್ಲಿ ಸಿಎಂ ದೇವೇಂದ್ರ ಫಡ್ನವಿಸ್ ಪಾಸ್ ಆಗ್ತಾರಾ?

ಶನಿವಾರ, 23 ನವೆಂಬರ್ 2019 (10:45 IST)
ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಬಿಜೆಪಿ ,ಎನ್ ಸಿಪಿ ಸೇರಿ ಸರ್ಕಾರ ರಚಿಸಿದ ಹಿನ್ನಲೆಯಲ್ಲಿ ಬಹುಮತ ಪರೀಕ್ಷೆಯಲ್ಲಿ ಸಿಎಂ ದೇವೇಂದ್ರ ಫಡ್ನವಿಸ್ ಪಾಸ್ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.



ಹೌದು. ಮಹಾರಾಷ್ಟ್ರದಲ್ಲಿ ಬಿಜೆಪಿ ,ಎನ್ ಸಿಪಿ ಸೇರಿ ಸರ್ಕಾರ ರಚಿಸಿದ್ದು, ಪಕ್ಷೇತರರು 10-15 ಶಾಸಕರಿಂದ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ನವೆಂಬರ್ 30ಕ್ಕೆ ಬಹುಮತ ಸಾಬೀತುಪಡಿಸುವುದಾಗಿ ಹೇಳಿದೆ.


ಈಗಾಗಲೇ ಬಿಜೆಪಿಗೆ 30ಕ್ಕೂ ಹೆಚ್ಚು ಎನ್ ಸಿಪಿ ಶಾಸಕರು ಬೆಂಬಲ ನೀಡಲಿದ್ದಾರೆ. ಅಲ್ಲದೇ 4ಕ್ಕೂ ಹೆಚ್ಚು ಶಿವಸೇನೆ ಶಾಸಕರಿಂದಲೂ ಬಿಜೆಪಿಗೆ ಬೆಂಬಲ ಸಿಗಲಿದೆ ಎನ್ನಲಾಗಿದೆ. ಅದರ ಜೊತೆಗೆ ಪಕ್ಷೇತರರು 10-15 ಶಾಸಕರಿಂದ ಬಿಜೆಪಿಗೆ ಬೆಂಬಲ ಸಿಕ್ಕರೆ ಫಡ್ನವಿಸ್ ಸರ್ಕಾರಕ್ಕೆ ಪೂರ್ಣ ಬಹುಮತ ಸಿಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ