ಪತಿಯನ್ನು ಪತ್ನಿ ಮೋಟಾ ಹಾಥಿ ಎಂದರೆ ವಿಚ್ಚೇದನ ನೀಡಬಹುದು: ಕೋರ್ಟ್

ಸೋಮವಾರ, 17 ಜೂನ್ 2019 (18:59 IST)
ದಪ್ಪಗಿರುವ ಪತಿಯನ್ನು ಪತ್ನಿ ಮೋಟಾ ಹಾಥಿ ಎಂದು ಕರೆದಲ್ಲಿ ಆಕೆಗೆ ವಿಚ್ಚೇದನ ನೀಡಬಹುದು. ಅಂತಹ ವ್ಯಂಗ್ಯ ದಾಂಪತ್ಯ ಜೀವನದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಪತ್ನಿಯ ಲೈಂಗಿಕ ಬಯಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಆಕೆ ನೀಡಿದ ಕ್ರೂರ ಶಿಕ್ಷೆಯ ವಿರುದ್ಧ ಪತಿಯೊಬ್ಬ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದನು. ಕೇಸ್ ವಿಚಾರಣೆ ನಡೆಸಿದ ನ್ಯಾಯಾಲಯ ಪತಿಯ ಪರವಾಗಿ ಆದೇಶ ಹೊರಡಿಸಿದೆ. 
 
ಪತಿ ದಪ್ಪಗಿದ್ದರಿಂದ ಹಾಥಿ, ಮೋಟಾ ಅತಿಥಿ ಮತ್ತು ಮೋಟಾ ಎಲಿಫೆಂಟ್ ಎಂದು ಪತ್ನಿಯೊಬ್ಬಳು ಪತಿಯನ್ನು ಅಗೌರವದಿಂದ, ಅಸಭ್ಯ ಪದಗಳಿಂದ ಕರೆಯುವುದು ಪತಿಯ ಗೌರವಕ್ಕೆ ಕುಂದು ತರುವ ವಿಷಯ ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಅಭಿಪ್ರಾಯಪಟ್ಟರು.
 
ಪತ್ನಿಯ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಪತಿಯ ವಿರುದ್ಧ ಗೌರವದ ರೀತಿಯಲ್ಲಿ ವರ್ತಿಸುವುದು ಪ್ರತಿಯೊಬ್ಬ ಪತ್ನಿಯ ಆದ್ಯ ಕರ್ತವ್ಯ ಎಂದು ಕೋರ್ಟ್ ಪತಿಗೆ ವಿಚ್ಚೇದನ ನೀಡಲು ಅನುಮತಿ ನೀಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ