ಪತಿಯನ್ನು ದೂರ ಮಾಡಿದ್ದಕ್ಕೆ ಬಾವನ ಕೊಂದ ಮಹಿಳೆ

ಭಾನುವಾರ, 6 ಫೆಬ್ರವರಿ 2022 (10:33 IST)
ನವದೆಹಲಿ: ಪತಿಗೆ ಡ್ರಿಂಕ್ಸ್ ಮಾಡಿಸಿ, ವ್ಯವಹಾರ ನೆಪದಲ್ಲಿ ತನ್ನಿಂದ ದೂರವಿಡುತ್ತಿದ್ದ ಬಾವನನ್ನು ಮಹಿಳೆ ಕೊಲೆ ಮಾಡಿದ ಘಟನೆ ನಡೆದಿದೆ.

ಮಹಿಳೆ ತನ್ನ ಸಹೋದ್ಯೋಗಿಯ ಸಹಾಯದಿಂದ ಬಾವನ ಕತ್ತು ಹಿಸುಕಿ ಕೊಲೆ ಮಾಡಿ ಪೊದೆಯೊಂದರಲ್ಲಿ ಬಿಸಾಕಿದ್ದಾಳೆ. ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ನಡೆದ ವಿಚಾರ ಗೊತ್ತಾಗಿದೆ.

ಪತಿಯ ವ್ಯವಹಾರದಲ್ಲಿ ಆರೋಪಿ ಮೂಗು ತೂರಿಸಿದ್ದ. ಇದರಿಂದಾಗಿ ತಾನು ಪತಿಯಿಂದ ದೂರವಾಗಿದ್ದೆ. ಅಲ್ಲದೆ, ಪತಿಯನ್ನು ಮದ್ಯಸೇವಿಸಲು ಕರೆದುಕೊಂಡು ಹೋಗುತ್ತಿದ್ದ. ಇದೇ ಆಕ್ರೋಶದಿಂದ ಮಹಿಳೆ ತನ್ನ ಸಹೋದ್ಯೋಗಿ ಸಹಾಯದಿಂದ ಬಾವನನ್ನು ಕೊಲೆ ಮಾಡಿದ್ದಾಳೆ. ಪೊಲೀಸರು ಮಹಿಳೆ ಮತ್ತು ಆಕೆಯ ಸಹೋದ್ಯೋಗಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ