ಗೆಳೆಯನೊಂದಿಗೆ ವಿವಾಹವಾಗಲು 3 ವರ್ಷದ ಮಗುವನ್ನು ಅಪಹರಿಸಿದ ಯುವತಿ
ಗುರುವಾರ, 11 ಮಾರ್ಚ್ 2021 (07:33 IST)
ಪಂಜಾಬ್ : ಗೆಳೆಯನೊಂದಿಗೆ ವಿವಾಹವಾಗಲು ಯುವತಿ 3 ವರ್ಷದ ಮಗುವನ್ನು ಅಪಹರಿಸಿದ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.
ಯುವತಿ ತನ್ನ ಗೆಳೆಯನೊಂದಿಗೆ ವಿವಾಹವಾಗಲು ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಆ ವೇಳೆ ಹೋಟೇಲ್ ನಲ್ಲಿ ಉಳಿದುಕೊಳ್ಳಲು ರೂಂ ಪಡೆಯುವುದಕ್ಕಾಗಿ ತಾವು ಮಗುವನ್ನು ಹೊಂದಿರುವ ದಂಪತಿಗಳು ಎಂದು ತಿಳಿಯಲು ತನ್ನ ಜೊತೆ 3 ವರ್ಷದ ಮಗುವನ್ನು ಅಪಹರಿಸಿದ್ದಾಳೆ.
ಮನೆಯವರು ಮಗು ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಪೊಲೀಸರು ಮಗುವನ್ನು ಪತ್ತೆಮಾಡಿ ರಕ್ಷಿಸಿದ್ದಾರೆ. ಆರೋಪಿ ಯುವತಿಯನ್ನು ಬಂಧಿಸಿ ವಿಚಾರಿಸಿದಾಗ ಆಕೆ ನಿಜಾಂಶ ಬಾಯ್ಬಿಟ್ಟಿದ್ದಾಳೆ.