ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆಂಬ್ಯುಲೆನ್ಸ್ ಸುತ್ತುವರೆದ 12 ಸಿಂಹಗಳು

ಶನಿವಾರ, 1 ಜುಲೈ 2017 (11:56 IST)
ಪ್ರತಿಯೊಂದು ಪ್ರಸವವೂ ಹೆಣ್ಣಿಗೆ ಪುನರ್ಜನ್ಮ ಎನ್ನುತ್ತಾರೆ. ಗುಜರಾತ್`ನ ಮಂಗುಬೆನ್ ಮಕ್ವಾನಾ ಎಂಬ ಮಹಿಳೆಯ ಪ್ರಸವ ಮಾತ್ರ ಎಂದಿಗೂ ಮರೆಯುವಂತದ್ದಲ್ಲ.
 

ಹೌದು, ಜೂನ್ 29ರಂದು 32 ವರ್ಷದ ಗರ್ಭಿಣಿ ಗುಜರಾತ್`ನ ಗಿರ್ ಅರಣ್ಯದಲ್ಲಿ ಆಂಬ್ಯುಲೆನ್ಸ್`ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಮ್ರೇಲಿ ಜಿಲ್ಲೆಯ ಕುಗ್ರಾಮದಿಂದ ಆಸ್ಪತ್ರೆಗೆ ಕರೆತರುತ್ತಿದ್ದ ಮಾರ್ಗಮಧ್ಯೆ 12 ಸಿಂಹಗಳು ಆಂಬ್ಯುಲೆನ್ಸ್ ಅನ್ನ ಸುತ್ತವರೆದಿದೆ. ರಸ್ತೆಗೆ ಅಡ್ಡಲಾಗಿ ನಿಂತಿವೆ. 20 ನಿಮಿಷಗಳ ಈ ಸಂಘರ್ಷದಲ್ಲಿ ಅಂಜದ ವೈದ್ಯಕೀಯ ಸಿಬ್ಬಂದಿ ಹೆರಿಗೆ ಮಾಡಿಸಿದ್ದಾರೆ.

`ಮಕ್ವಾನಾ ಅವರನ್ನ ಕರೆದುಕೊಂಡು ಆಂಬ್ಯುಲೆನ್ಸ್ ಜಫರಾಬಾದ್`ನತ್ತ ತೆರಳುತ್ತಿದ್ದಾಗ ಮಹಿಳೆಗೆ ನೋವು ಕಾಣಿಸಿಕೊಂಡು ಮಗುವಿನ ತಲೆ ಹೊರಬಂದಿತ್ತು. ಟೆಕ್ನಿಶಿಯನ್ ಅಶೋಕ್ ಆಂಬ್ಯುಲೆನ್ಸ್ ನಿಲ್ಲಿಸಿ ಫೋನಿನ ಮೂಲಕವೇ ವೈದ್ಯರನ್ನ ಕಾಂಟ್ಯಾಕ್ಟ್  ಮಾಡಿ ಹೆರಿಗೆ ಮಾಡಿಸುತ್ತಿದ್ದೆವು. ಇದೇ ಸಂದರ್ಭ ಮನುಷ್ಯರು ಬಂದಿರುವ ಸೂಚನೆ ಅರಿತ ಹತ್ತಾರು ಸಿಂಹಗಳು ಬಂದು ಸುತ್ತುವರೆದವು. ಆಂಬ್ಯುಲೆನ್ಸ್`ನಲ್ಲಿದ್ದ ಸ್ಥಳೀಯ ಜಾಧವ್ ಸಿಂಹಗಳನ್ನ ಬೆದರಿಸಿ ಓಡಿಸಲು ಯತ್ನಿಸಿದರೂ ಫಲ ಸಿಗಲಿಲ್ಲ. ಅವುಗಳಲ್ಲಿ ಕೆಲವು ನಮ್ಮ ಆಂಬ್ಯುಲೆನ್ಸ್ ಮುಂದೆ ಮಲಗಿ ರಸ್ತೆ ಬಂದ್ ಮಾಡಿದವು. ಈ ಮಧ್ಯೆ, ಮಹಿಳೆ ಹೆರಿಗೆಯಾಯಿತು. ಬಳಿಕ ನಿಧಾನವಾಗಿ ಆಂಬ್ಯುಲೆನ್ಸ್ ಸ್ಟಾರ್ಟ್ ಮಾಡಿ ಹೊರಟೆವು. ಆಂಬ್ಯುಲೆನ್ಸ್ ಲೈಟ್ ಕಂಡ ಸಿಂಹಗಳು ಸ್ವಲ್ಪ ಸ್ವಲ್ಪವೇ ಜಾಗ ಬಿಟ್ಟವು. ಇದೀಗ, ತಾಯಿ ಮಗು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ